ಮೈಸೂರು: ಇಲ್ಲಿಯ ಉದಯಗಿರಿ ಪೊಲೀಸ್ ಠಾಣೆ ಮೇಲೆ ಪುಂಡರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗಲಾಟೆಯ ಭಯಾನಕ ದೃಶ್ಯಗಳು ಈಗ ವೈರಲ್ ಆಗುತ್ತಿವೆ.
ಪುಂಡರ ಹಾವಳಿ ಹೆಚ್ಚಾಗುತ್ತಿದ್ದಂತೆ ಪುಂಡರ ಗುಂಪನ್ನು ಡಿಸಿಪಿ ಮುತ್ತುರಾಜು ಸಮಾಧಾನ ಮಾಡಲು ಮುಂದಾಗಿದ್ದರು. ಈ ವೇಳೆ ರೊಚ್ಚಿಗೆದ್ದ ಪುಂಡರು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಪೊಲೀಸ್ ಜೀಪ್ ಹತ್ತಿ, ಪರಿ ಪರಿಯಾಗಿ ಕೇಳಿಕೊಂಡರೂ ಪುಂಡರ ಗುಂಪು ಸುಮ್ಮನಾಗಿಲ್ಲ. ಪುಂಡರ ಸಂಖ್ಯೆ ಸಾವಿರದಷ್ಟಾಗುತ್ತಿದ್ದಂತೆ ಬೇಕಾಬಿಟ್ಟಿಯಾಗಿ ವರ್ತಿಸಿದ್ದಾರೆ. ಆದರೆ, ಬೆರಳೆಣಿಕಿಯಷ್ಟು ಜನ ಪೊಲೀಸರು ಮಾತ್ರ ಪರಿಸ್ಥಿತಿ ಹತೋಟಿಗೆ ತರಲು ಯತ್ನಿಸಿದ್ದಾರೆ.
ಪೊಲೀಸರು ಸ್ವಲ್ಪ ಯಾಮಾರಿದ್ದರೂ ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣದಂತೆ ಈ ಘಟನೆಯೂ ನಡೆಯುತ್ತಿತ್ತು ಎನ್ನಲಾಗಿದೆ. ಪೊಲೀಸರ ಜೀವ ಉಳಿದಿರುವುದೇ ಈಗ ಪವಾಡ ಎನ್ನುವಂತಾಗಿದೆ.