ಬೆಂಗಳೂರು: ನಟ ಡಾಲಿ ಧನಂಜಯ್(Dolly Dhananjay) ಹಾಗೂ ಧನ್ಯತಾ ಮದುವೆ ಶಾಸ್ತ್ರಗಳು ಆರಂಭವಾಗಿವೆ. ಡಾಲಿ ಧನಂಜಯ್ ಹಾಗೂ ಡಾ. ಧನ್ಯತಾ ಸದ್ಯದಲ್ಲೇ ವಿವಾಹ ಜೀವನಕ್ಕೆ ಕಾಲಿಡುತ್ತಿದ್ದು, ಈಗಾಗಲೇ ವರನ ಮನೆಯಲ್ಲಿ ಮದುವೆ ಶಾಸ್ತ್ರಗಳು ಆರಂಭವಾಗಿವೆ. ಧನಂಜಯ್ ಅವರ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ ಸಂಭ್ರಮ ಕಳೆಗಟ್ಟಿದೆ.
ಡಾಲಿ ಧನಂಜಯ್ ಸಂಪ್ರದಾಯದಂತೆ ಅರಸಿಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಕೊಂಡ ತುಳಿದಿದ್ದಾರೆ. ನಂತರ ಮನೆಯಲ್ಲಿ ಮನೆದೇವರ ಪೂಜೆ ನೆರವೇರಿತು. ಇದೇ ಶನಿವಾರ ಹಾಗೂ ಭಾನುವಾರ ಮೈಸೂರಿನಲ್ಲಿ ಡಾಲಿ ಹಾಗೂ ಧನ್ಯತಾ ಸಪ್ತಪದಿ ತುಳಿಯಲಿದ್ದಾರೆ.