ಬೆಂಗಳೂರು: ಎಸಿಪಿಗಳಿಬ್ಬರ ವಿರುದ್ಧ ಅಧಿಕಾರಿಯ ಪತ್ನಿ ದೂರು ದಾಖಲಿಸಿದ್ದಾರೆ. ಆಗ್ನೇಯ ವಿಭಾಗ ಸೆನ್ ಎಸಿಪಿ ತಮ್ಮ ಬ್ಯಾಚ್ಮೆಂಟ್ ಆಗಿದ್ದ ಮತ್ತೋರ್ವ ಅಧಿಕಾರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಪತ್ನಿ ಎಫ್ ಐಆರ್ ದಾಖಲಿಸಿದ್ದಾರೆ. ಎಸಿಪಿಗಳಾದ ಗೋವರ್ಧನ್ ಹಾಗೂ ಅಶ್ವಿನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗೋವರ್ಧನ್ ಪತ್ನಿ ಅಮೃತ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಈ ಕುರಿತು ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋವರ್ಧನ್ ಅವರು ಡಿವೈಎಸ್ಪಿ ಆದಾಗಿನಿಂದಲೂ ಕುಟುಂಬದಿಂದ ದೂರ ಆಗಿದ್ದಾರೆ. ಅವರದೇ ಬ್ಯಾಚ್ಮೆಂಟ್ ಆಗಿರುವ ಡಿವೈಎಸ್ಪಿ ಅಶ್ವಿನಿ ಜೊತೆಗೆ ಸಂಬಂಧ ಹೊಂದಿದ್ದಾರೆಂದು ಆರೋಪ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಕೂಡ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೇ, ಗೋವರ್ಧನ್ ಹಾಗೂ ಅಶ್ವಿನಿ ಮಾಡಿರುವ ಚಾಟ್ ಹಾಗೂ ಜೊತೆಗಿರುವ ಫೋಟೋಗಳನ್ನು ಸಾಕ್ಷಿಯಾಗಿಟ್ಟುಕೊಂಡು ದೂರು ದಾಖಲಿಸಿದ್ದಾರೆ.