ಮುಂಬೈ: ನಟಿ ಕತ್ರಿನಾ ಕೈಫ್ ಬಗ್ಗೆ ಪತಿ ವಿಕ್ಕಿ ಕೌಶಲ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ವಿಕ್ಕಿ ಕೌಶಲ್ ಅವರು ಕತ್ರಿನಾ ಕೈಫ್ ರನ್ನು ‘ವಿಚಿತ್ರ, ಆದರೆ ನಿಜಕ್ಕೂ ಪ್ರಾಣಿ ನೀವು’ ಎಂದು ವಿಕ್ಕಿ ಕೌಶಲ್ ಹೇಳಿದ್ದಾರೆ. ‘ನನ್ನ ಪ್ರೀತಿಯ ಗಂಡ ನನ್ನನ್ನು ವರ್ಣಿಸಿದ್ದು ಹೀಗೆ’ ಎಂಬ ಕ್ಯಾಪ್ಷನ್ನೊಂದಿಗೆ ಕತ್ರಿನಾ ಕೈಫ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ನಡುವೆ ವಯಸ್ಸಿನ ಅಂತರ ಇದೆ. ಕತ್ರಿನಾ ಅವರು ವಿಕ್ಕಿ ಕೌಶಲ್ ಗಿಂತ 5 ವರ್ಷ ದೊಡ್ಡವರು. ಚಿತ್ರರಂಗದಲ್ಲಿ ಕೂಡ ಕತ್ರಿನಾ ಕೈಫ್ ಸೀನಿಯರ್. ಆದರೂ ಅವರಿಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು. ನಂತರ 2021ರಲ್ಲಿ ಮದುವೆಯಾದರು.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಹಲವು ಸಮಯದಿಂದ ಹರಿದಾಡುತ್ತಿತ್ತು. ಆದರೆ ಆ ವಿಷಯದ ಬಗ್ಗೆ ಅವರಿಬ್ಬರು ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. ಆನಂತರ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಸದ್ಯ ವಿಕ್ಕಿ ಕೌಶಲ್ ಅವರು ‘ಛಾವ’ ಸಿನಿಮಾದಲ್ಲಿ ನಟಿಸಿದ್ದಾರೆ. ‘ವ್ಯಾಲೆಂಟೈನ್ಸ್ ಡೇ’ ದಿನವೇ ಈ ಸಿನಿಮಾ ಬಿಡುಗಡೆಯಾಗಲಿದೆ.