ಬೆಂಗಳೂರು: ನಟರು ಪರಸ್ಪರ ಒಬ್ಬರಿಗೊಬ್ಬರು ಒಳ್ಳೆಯ ಸ್ನೇಹ ಹೊಂದಿದ್ದರೂ ಅಭಿಮಾನಿಗಳು ಮಾತ್ರ ಕಾಲು ಕೆರೆದು ಜಗಳ ಮಾಡುತ್ತಿರುತ್ತಾರೆ. ಇಂತಹ ಅಭಿಮಾನಿಗಳಿಗೆ ಈಗ ರಜನಿಕಾಂತ್ ಟೀಮ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಟ ದಳಪತಿ ವಿಜಯ್ ಕುರಿತು ರಜನಿಕಾಂತ್ ಅಭಿಮಾನಿಯೊಬ್ಬ ಕೆಟ್ಟದಾಗಿ ಕಮೆಂಟ್ ಮಾಡಿದ್ದು, ಇದಕ್ಕೆ ರಜನಿಕಾಂತ್ ಟೀಮ್ ಆಕ್ರೋಶ ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ. ದಳಪತಿ ವಿಜಯ್ಗೆ ಮೊಟ್ಟೆ ಹೊಡೆಯಬೇಕು ಎಂದು ರಜನಿಕಾಂತ್ ಅಭಿಮಾನಿ ಹೇಳಿದ್ದಾನೆ. ಅಲ್ಲದೇ ಅಸಭ್ಯವಾಗಿ ಮಾತನಾಡಿದ್ದಾನೆ ಎನ್ನಲಾಗಿದೆ. ಇದಕ್ಕೆ ರಜನಿಕಾಂತ್ ಟೀಮ್ ಕಡೆಯಿಂದ ಎಚ್ಚರಿಕೆ ನೀಡಲಾಗಿದೆ. ಇಂಥ ವರ್ತನೆಗಳು ಮರುಕಳಿಸಬಾರದು ಎಂಬ ಉದ್ದೇಶದಿಂದ ಅಭಿಮಾನಿಗಳಿಗೆ ಬುದ್ಧಿ ಹೇಳಲಾಗಿದೆ ಎಂದು ವರದಿಯಾಗಿದೆ.
‘ಸಿನಿಮಾ ಇರುವುದು ಜನರನ್ನು ಒಗ್ಗೂಡಿಸಲು. ಜನರ ನಡುವೆ ಬಿರುಕು ಮೂಡಿಸುವುದಕ್ಕೆ ಅಲ್ಲ. ಅಭಿಮಾನಿಯ ಹೆಸರಿನಲ್ಲಿ ಯಾರೂ ಕೂಡ ಬೇರೆ ನಟರ ವಿರುದ್ಧ ದ್ವೇಷ ಹರಡಿಸಬಾರದು. ರಜನಿಕಾಂತ್ ಅವರ ಅಭಿಮಾನಿಗಳಾದ ನಾವು ಅಂಥ ಕೆಲಸ ಮಾಡುವುದು ಬೇಡ. ನನ್ನ ನೆಚ್ಚಿನ ನಾಯಕನನ್ನು ನಾವು ಪಾಸಿಟಿವಿಟಿ ಮತ್ತು ಪ್ರೀತಿಯಿಂದ ಸಂಭ್ರಮಿಸೋಣ. ಅಭಿಮಾನದ ಸಂಸ್ಕೃತಿಯನ್ನು ಗೌರವ ಮತ್ತು ಹೆಮ್ಮೆಯಿಂದ ವ್ಯಾಖ್ಯಾನಿಸೋಣ. ದ್ವೇಷದಿಂದ ಅಲ್ಲ’ ಎಂದಿದೆ ರಜನಿಕಾಂತ್ ಟೀಮ್ ಹೇಳಿದೆ.