ಕತಾರ್: ಕೋಟ್ಯಧಿಪತಿಗಳು ಮತ್ತು ದೊಡ್ಡದೊಡ್ಡ ಕಂಪನಿಗಳ ಮಾಲೀಕರು ತಮ್ಮ ಸಂಸ್ಥೆಯ ಆರ್ಥಿಕ ಅಭಿವೃದ್ಧಿಯ ವಿಚಾರದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ. ಆದರೆ ಲುಲು ಗ್ರೂಪ್‌ನ ಅಧ್ಯಕ್ಷ ಎಂ.ಎ. ಯೂಸುಫ್ ಕೊಂಚ ಭಿನ್ನ. ಅವರು ಆಗಾಗ ಮಾನವೀಯ ಕಾರ್ಯಗಳಿಗಾಗಿ ಸುದ್ದಿಯಾಗುತ್ತಾರೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ (Viral Video ) ಅವರು ತಮ್ಮ ಕಂಪನಿಯ ಸಿಬ್ಬಂದಿಯೊಬ್ಬರ ಶವದ ಪೆಟ್ಟಿಗೆಗೆ ಹೆಗಲುಕೊಟ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಎಂ.ಎ. ಯೂಸುಫ್ ಅಲಿ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಕಂಡಿವೆ. ಶಿಹಾಬುದ್ದೀನ್ ಎಂಬುವರು ಅಬುಧಾಬಿಯ ಅಲ್ ವಹ್ದಾ ಮಾಲ್ ಲುಲು ಹೈಪರ್‌ಮಾರ್ಕೆಟ್‌ನಲ್ಲಿ ಮ್ಯಾನೇಜರ್ ಆಗಿದ್ದರು. ಅವರು ತಿರುರ್ ಕನ್ಮನಂ ಮೂಲದವರು ಮತ್ತು ಹೃದಯಾಘಾತದಿಂದ ಮೃತಪಟ್ಟಿದ್ದರು.
“ಶಿಹಾಬುದ್ದೀನ್ ನಮ್ಮ ಅಬುಧಾಬಿ ಅಲ್ ವಹ್ದಾ ಮಾಲ್ ಲುಲು ಹೈಪರ್‌ಮಾರ್ಕೆಟ್ ಮೇಲ್ವಿಚಾರಕರ. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡೆ. ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ. ದೇವರು ಆಶೀರ್ವದಿಸಲಿ,” ಎಂದು ವೈರಲ್ ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ.
ಲುಲು ಮಾಲೀಕನ ಕಾರ್ಯಕ್ಕೆ ಶ್ಲಾಘನೆ
ಲುಲು ಗ್ರೂಪ್‌ನ ಅಧ್ಯಕ್ಷ ಎಂ.ಎ. ಯೂಸುಫ್ ಅಲಿ ಅವರ ಈ ಮಾನವೀಯ ಕೆಲವನ್ನು ಜನರು ಶ್ಲಾಘಿಸಿದ್ದಾರೆ. “ತಮ್ಮ ಕಂಪನಿಯ ನೌಕರನೊಬ್ಬನ ಪಾರ್ಥಿವ ಶರೀರದ ಬಳಿ ಪ್ರಾರ್ಥನೆ ನಡೆಸುತ್ತಿರುವ ವ್ಯಕ್ತಿ ದೇಶದ ದೊಡ್ಡ ಕೋಟ್ಯಾಧಿಪತಿ. ಇದು ಮಾನವೀಯತೆಗೆ ನಿಜ ಉದಾಹರಣೆ,” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಹಲವಾರು ಬಳಕೆದಾರರು ಯೂಸುಫ್ ಅಲಿ ಅವರನ್ನು ಆದರ್ಶ ವ್ಯಕ್ತಿ ಎಂಬುದಾಗಿ ಶ್ಲಾಘಿಸಿದ್ದಾರೆ. ಅವರ ಸಹಾನುಭೂತಿ ಮತ್ತು ಜವಾಬ್ದಾರಿಯನ್ನು ಮೆಚ್ಚಿಕೊಂಡಿದ್ದಾರೆ.
ಕೇರಳ ಮೂಲದ ಉದ್ಯಮಿ
ಯೂಸುಫ್ ಅಲಿ ಅವರ ಲುಲು ಗ್ರೂಪ್. ಭಾರತ ಮತ್ತು ಯುಎಇಯ ಹಲವಾರು ನಗರಗಳಲ್ಲಿ 240ಕ್ಕೂ ಹೆಚ್ಚು ಹೈಪರ್‌ಮಾರ್ಕೆಟ್‌ಗಳು ಮತ್ತು ಮಾಲ್‌ಗಳನ್ನು ಹೊಂದಿದೆ. ಫೋರ್ಬ್ಸ್ ಮಾಹಿತಿ ಪ್ರಕಾರ, ಅವರ ಒಟ್ಟು ಸಂಪತ್ತು 6.4 ಬಿಲಿಯನ್ ಡಾಲರ್ (ಸುಮಾರು 55,000 ಕೋಟಿ ರೂಪಾಯಿ) ಮೀರಿದೆ.
ಇದನ್ನೂ ಓದಿ: Maha Kumbh: ಮಹಾಕುಂಭ ಮೇಳದಲ್ಲಿ ಭೀಕರ ಅಗ್ನಿ ಅವಘಡ
ಲುಲು ಗ್ರೂಪ್ ಮಾಲೀಕರಿಗೆ ಅಪಾರ ಅಭಿಮಾನಿಗಳಿದ್ದಾರೆ. ಒಮ್ಮೆ ಅವರು ತಮ್ಮ ಅಭಿಮಾನಿ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಶಾಲಿ ಎಫಿನ್‌ಗೆ 2 ಲಕ್ಷ ರೂ. ಮೌಲ್ಯದ ರಾಡೋ ವಾಚ್ ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದರು.