ಹಾವೇರಿ: ತಂಬಾಕು (Tobacco) ಸೇವಿಸಬೇಡ ಅಂತಾ ಬುದ್ಧಿ ಹೇಳಿದ್ದಕ್ಕೆ ಯುವತಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಈ ಘಟನೆ ಹಾವೇರಿ (Haveri) ತಾಲೂಕಿನ ಕರ್ಜಗಿ (Karjagi) ಗ್ರಾಮದ ರೈಲ್ವೆ ಸ್ಟೇಷನ್ ಹತ್ತಿರ ನಡೆದಿದೆ. ಮೃತ ಯುವತಿಯನ್ನು ಬೀಬಿಜಾನ್ ಸೊಂಡಿ (18) ಎಂದು ಗುರುತಿಸಲಾಗಿದೆ. ಮನೆಗೆಲಸ ಮಾಡುತ್ತಿದ್ದ ಯುವತಿ ಕಳೆದ ಕೆಲವು ದಿನಗಳಿಂದ ತಂಬಾಕು ಸೇವನೆ ಚಟಕ್ಕೆ ಅಂಟಿಕೊಂಡಿದ್ದಳು. ಹೀಗಾಗಿ ತಾಯಿ ತಂಬಾಕು ಸೇವನೆ ಮಾಡಬೇಡ ಅಂತಾ ಬುದ್ಧಿ ಹೇಳಿದ್ದರು. ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಯುವತಿ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.