ಚಾಮರಾಜನಗರ: ಮುದ್ದುಗಾರ ಮಾದಪ್ಪ ಎಂಬ ಮಹದೇಶ್ವರ ಸ್ವಾಮಿಯ ಜಾನಪದ ಶೈಲಿಯ ಸುಪ್ರಭಾತ ದೃಶ್ಯ ಗೀತೆಯನ್ನು ಬಿಡುಗಡೆ ಮಾಡಲಾಯಿತು.
ಶ್ರೀಮಲೆ ಆಡಿಯೋ ವಿಡಿಯೋ ಸಂಸ್ಥೆ ಈ ಸುಪ್ರಭಾತವನ್ನು ಹೊರ ತಂದಿದೆ. ಚೆಲ್ಲಾಟಗಾರ ಮಾದಪ್ಪ ಖ್ಯಾತಿಯ ಕಲಾಶ್ರೀ ಡಾ. ಜಯಶ್ರೀ ಅರವಿಂದ್ ಅವರ ಸಾಹಿತ್ಯ ಮತ್ತು ಸಂಗೀತದಲ್ಲಿ ಈ ಸುಪ್ರಭಾತ ಗೀತೆ ಮೂಡಿ ಬಂದಿದೆ. ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಮಲೆ ಮಹದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಬಿಡುಗಡೆ ಮಾಡಿದರು.
ಈ ವೇಳೆ ಸಂಗೀತ ನಿರ್ದೇಶಕಿ ಡಾ.ಜಯಶ್ರೀ ಅರವಿಂದ್, ಅರವಿಂದ್ ಕಿಗ್ಗಾಲ್, ಮಲೆ ಆಡಿಯೋ ವಿಡಿಯೋ ಸಂಸ್ಥೆಯ ಬಿ.ಅರುಣ್ ಕುಮಾರ್ ಸಿಂಗ್, ಎಂ.ಪ್ರಕಾಶ್, ಬಿ.ಹೇಮಾವತಿ ಮತ್ತು ತಲಕಾಡು ದೇವಸ್ಥಾನದ ಅಧ್ಯಕ್ಷ ನಾಗರಾಜ್ ಸೇರಿದಂತೆ ಹಲವರು ಇದ್ದರು.
ಈ ಸುಪ್ರಭಾತವನ್ನು ಗಾಯಕರಾದ ಅಜಯ್ ವಾರಿಯರ್, ಶ್ರೀರಕ್ಷಾ ಪ್ರಿಯರಂ ಹಾಡಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಹೃಶಾಂಕ್ ಸಿಂಗ್ ಮಾಡಿದ್ದಾರೆ.