ಬೆಂಗಳೂರು: ತಂದೆಯಿಂದಲೇ ಮರ್ಯಾದೆ ಹತ್ಯೆ ನಡೆದಿರುವ ಆರೋಪವೊಂದು ಕೇಳಿ ಬಂದಿದೆ.
ಯುವತಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಮರ್ಯಾದೆ ಹತ್ಯೆಯ ಆರೋಪ ಕೇಳಿ ಬಂದಿದೆ. ಈ ಕುರಿತು ಯುವತಿಯ ಪ್ರಿಯಕರ ನಿತಿನ್ ಎಂಬಾತ ಗಂಭೀರ ಆರೋಪ ಮಾಡಿದ್ದಾನೆ.
ತಂದೆಯೇ ಮಗಳನ್ನು ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ. ಸಾವನ್ನಪ್ಪಿರುವ ಯುವತಿ ಹಾಗೂ ನಾನು ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೇವು. ಆದರೆ, ಕಳೆದ ಎರಡು ದಿನಗಳ ಹಿಂದೆ ಯುವತಿಯ ಪೋಷಕರಿಗೆ ಪ್ರೀತಿಯ ಬಗ್ಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ.
ಅಂದೇ ರಾತ್ರಿ ಯುವತಿಯ ತಂದೆ ಪ್ರಿಯಕರನಿಗೆ ಕರೆ ಮಾಡಿದ್ದಾರೆ. ಬೆಳಗ್ಗೆ ಮಾತುಕತೆಗೆ ಬರುವಂತೆ ತಿಳಿಸಿದ್ದರು. ಯುವತಿ ತಂದೆಯ ಸ್ನೇಹಿತನ ಮನೆಯಲ್ಲಿ ನ್ಯಾಯ ಪಂಚಾಯತಿ ನಡೆದಿದೆ. ಆಗ ಯುವತಿ ಮೇಲೆ ತಂದೆ ಹಲ್ಲೆ ಮಾಡಿದ್ದಾರೆ. ಪ್ರಾಣ ಹೋದರೂ ಪ್ರೀತಿಗೆ ಒಪ್ಪಿಗೆ ನೀಡುವುದಿಲ್ಲ ಎಂದು ಕೂಗಾಡಿದ್ದಾರೆ. ಪ್ರಿಯಕರನ ತಾಯಿ ಎಷ್ಟೇ ಕೇಳಿಕೊಂಡರೂ ಒಪ್ಪಿಗೆ ನೀಡಿಲ್ಲ. ಆನಂತರ ಎರಡು ದಿನಗಳ ಸಮಯ ಕೇಳಿ ಯುವತಿಯನ್ನು ತಂದೆ ಕರೆದುಕೊಂಡು ಹೋಗಿದ್ದಾರೆ. ಮಾರ್ಗ ಮಧ್ಯೆ ಕೆರೆಗೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ಅಲ್ಲದೇ, ಈ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.