ಬೆಂಗಳೂರು: ಭದ್ರಾವತಿ ಶಾಸಕ ಸಂಗಮೇಶ್ ಅವರ ಪುತ್ರ ಬಸವೇಶ ಮಹಿಳಾ ಅಧಿಕಾರಿಯೊಂದಿಗೆ ಅಸಭ್ಯವಾಗಿ ಮಾತನಾಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಇದೀಗ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿ ಜ್ಯೋತಿ ಈಡಿಗ ಸಮುದಾಯದವರು. ಅವರ ವಿರುದ್ಧ ಶಾಸಕನ ಪುತ್ರ ಅಶ್ಲೀಲ ಪದ ಬಳಸಿರುವುದು ಅಕ್ಷಮ್ಯ ಅಪರಾಧ. ಹಿಂದುಳಿದ ವರ್ಗದ ಅಧಿಕಾರಿಗಳ ಮೇಲೆ ಇತ್ತೀಚೆಗೆ ಕಿರುಕುಳ ಹೆಚ್ಚಾಗಿ ನಡೆಯುತ್ತಿವೆ.
ರಾಜ್ಯ ಗೃಹ ಸಚಿವರು ಮಾತು ಎತ್ತಿದರೆ ಸಂವಿಧಾನ ಅಂತಾರೆ. ಆದರೆ, ರಾಜ್ಯದಲ್ಲಿರುವುದು ಇದೇನಾ ಸಂವಿಧಾನ? ಇದೇನಾ ಸಂವಿಧಾನದ ಪ್ರಕಾರ ನಡೆಯುವುದು? ಅಂದರೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಲ್ವರ್ಗದ ನಾಯಕರ ಪುತ್ರರಿಂದ ಈ ರೀತಿ ಹಿಂದುಳಿದ ವರ್ಗದ ಅಧಿಕಾರಿಯ ಮೇಲೆ ಆಗುತ್ತಿರುವ ಕಿರುಕುಳ ಸಹಿಸುವುದು ಅಸಾಧ್ಯ. ಕೂಡಲೇ ಶಾಸಕ ಸಂಗಮೇಶ್ ಪುತ್ರ ಬಸವೇಶ್ವರನ ವಿರುದ್ಧ ಗೂಂಡಾ ಕಾಯ್ದೆ ಹಾಕಬೇಕು. ಆತನಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.