ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿಬಿಜೆಪಿ ಗೆಲುವು ಸಾಧಿಸುತ್ತಲೇ ಎಲ್ಲರ ಬಾಯಲ್ಲಿನರೇಂದ್ರ ಮೋದಿ ಹೆಸರಿನ ನಂತರ ಪರ್ವೇಶ್ ವರ್ಮಾ (Parvesh Verma) ಅವರ ಹೆಸರೇ ಕೇಳಿಬಂದಿದೆ. 2024ರ ಲೋಕಸಭೆ ಚುನಾವಣೆಯಲ್ಲಿಟಿಕೆಟ್ ವಂಚಿತರಾಗಿದ್ದ ಪರ್ವೇಶ್ ವರ್ಮಾ ಅವರು ಕೇವಲ ಎರಡೇ ತಿಂಗಳಲ್ಲಿದೆಹಲಿಯಲ್ಲಿಮಾಡಿದ ಮೋಡಿ ಈಗ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ನವದೆಹಲಿ ಕ್ಷೇತ್ರದಲ್ಲಿಅರವಿಂದ ಕೇಜ್ರಿವಾಲ್ ಅವರನ್ನೇ ಸೋಲಿಸಿದ ಪರ್ವೇಶ್ ವರ್ಮಾ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿಸಲಾಗುತ್ತಿದೆ. ಇವರನ್ನು ಟ್ರಬಲ್ ಶೂಟರ್, ದೈತ್ಯ ನಾಯಕ ಎಂದೆಲ್ಲಬಿಂಬಿಸಲಾಗುತ್ತಿದೆ.
ಬಿಜೆಪಿಯ ನಿಷ್ಠಾವಂತ ನಾಯಕ
2014ರಿಂದ 2024ರವರೆಗೆ ಪೂರ್ವ ದೆಹಲಿ ಸಂಸದರಾಗಿದ್ದ ಪರ್ವೇಶ್ ವರ್ಮಾ ಅವರಿಗೆ 2024ರ ಲೋಕಸಭೆ ಚುನಾವಣೆ ವೇಳೆ ಟಿಕೆಟ್ ನಿರಾಕರಿಸಲಾಯಿತು. ಇದರಿಂದ ಬಂಡಾಯ ಏಳದ, ನಾಯಕರ ವಿರುದ್ಧ ಒಂದೇ ಒಂದು ಮಾತನಾಡದ ಪರ್ವೇಶ್ ವರ್ಮಾ, ತಾವು ಪಕ್ಷದ ನಿಷ್ಠಾವಂತ ನಾಯಕ ಎಂಬುದನ್ನು ಸಾಬೀತುಪಡಿಸಿದರು. ಈಗ ಅವರೇ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶದ ಮ್ಯಾನ್ ಆಫ್ ದಿ ಮ್ಯಾಚ್ ಎಂದು ಬಿಂಬಿಸಲಾಗುತ್ತಿದೆ.
ಚುನಾವಣೆಯಲ್ಲಿಅಬ್ಬರದ ಪ್ರಚಾರ
ಪರ್ವೇಶ್ ವರ್ಮಾ ತಾಳ್ಮೆ, ನಾಯಕತ್ವ ಗುಣ ಗುರುತಿಸಿದ್ದ ಬಿಜೆಪಿ ಹೈಕಮಾಂಡ್, ದೆಹಲಿ ವಿಧಾನಸಭೆ ಚುನಾವಣೆಯ ಅಖಾಡಕ್ಕೆ ಇಳಿಸಿತು. ಪರ್ವೇಶ್ ವರ್ಮಾ ಅವರೂ ಅಷ್ಟೇ, ಚುನಾವಣೆ ವೇಳೆ ಪಕ್ಷ, ಕಾರ್ಯಕರ್ತರನ್ನು ಸಂಘಟಿಸಿ ಅಬ್ಬರದ ಪ್ರಚಾರ ಕೈಗೊಂಡರು. ಕೇಜ್ರಿವಾಲ್ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡಿದರು. ಯಮುನಾ ನದಿ ನೀರು ಕಲುಷಿತ ಆಗಿದೆ ಎಂಬ ಪ್ರಕರಣದಿಂದ ಹಿಡಿದು ಶೀಶ್ ಮಹಲ್ ಪ್ರಕರಣಗಳವರೆಗೆ ಪ್ರತಿಯೊಂದು ವಿಷಯದಲ್ಲೂಆಪ್ ವೈಫಲ್ಯಗಳನ್ನು ಜನರಿಗೆ ತಿಳಿಸಿದರು.
ಇದೆಲ್ಲದರ ಪರಿಣಾಮವಾಗಿಯೇ ದೆಹಲಿಯಲ್ಲಿಬಿಜೆಪಿ ಗೆಲುವು ಸಾಧಿಸಿದೆ ಎನ್ನಲಾಗುತ್ತಿದೆ. ದೆಹಲಿ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರರಾಗಿರುವ ಪರ್ವೇಶ್ ವರ್ಮಾ ಅವರೂ ಸಿಎಂ ಆದರೂ ಅಚ್ಚರಿ ಇಲ್ಲ.