ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕ, ರಾಮಮಂದಿರ ಹೋರಾಟಕ್ಕೆ ಅಪಾರ ಕೊಡುಗೆ ನೀಡಿದ್ದ ಕರಸೇವಕ ಕಾಮೇಶ್ವರ ಚೌಪಾಲ್ (Kameshwar Chaupal) ಅವರು ದೆಹಲಿಯಲ್ಲಿ ನಿಧನರಾಗಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಮೊದಲ ಇಟ್ಟಿಗೆ ಇರಿಸಿದ್ದ ಖ್ಯಾತಿಯ ಇವರು ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.
ಕಾಮೇಶ್ವರ್ ಚೌಪಾಲ್ ಅವರು 2024ರ ಆಗಸ್ಟ್ ನಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ಇದಾದ ಬಳಿಕವೂ ಅವರ ಆರೋಗ್ಯ ಬಿಗಡಾಯಿಸಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಆರ್ ಎಸ್ ಎಸ್ ನಾಯಕರು ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.
ರಾಮಮಂದಿರ ಹೋರಾಟ
ಬಿಹಾರ ಮೂಲದವರಾದ ಕಾಮೇಶ್ವರ್ ಚೌಪಾಲ್ ಅವರು ರಾಮಮಂದಿರ ಹೋರಾಟದಕ್ಕಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. ಹಾಗಾಗಿ, ಇವರನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಸದಸ್ಯರನ್ನಾಗಿ ನೇಮಿಸಲಾಗಿತ್ತು. ರಾಮಮಂದಿರ ರಥಯಾತ್ರೆ, ಹೋರಾಟದಲ್ಲಿ ಇವರು ಹಲವು ವರ್ಷಗಳ ಕಾಲ ಪಾಲ್ಗೊಂಡಿದ್ದರು.
ಇಡೀ ಜೀವನವನ್ನು ಸಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದ ಇವರು, ಬಿಹಾರ ವಿಧಾನ ಪರಿಷತ್ ಸದಸ್ಯರೂ ಆಗಿದ್ದರು.