ಹುಬ್ಬಳ್ಳಿ: ಸರ್ಕಾರ ಹತ್ತು ಸುಗ್ರೀವಾಜ್ಞೆ ಜಾರಿಗೆ ತಂದರೂ ಫೈನಾನ್ಸ್ ಕಿರುಕುಳ ತಪ್ಪಿಸಲು ಆಗುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ದಿವ್ಯ ನಿರ್ಲಕ್ಷ್ಯ ವ್ಯಕ್ತವಾಗುತ್ತಿದೆ. ಇದರಿಂದಾಗಿಯೇ ಮತ್ತಷ್ಟು ಕಿರುಕುಳ ಹೆಚ್ಚಾಗುತ್ತಿವೆ. ಸರ್ಕಾರ ಕಾನೂನು ಮಾಡಿರುವುದರಿಂದಾಗಿ ಫೈನಾನ್ಸ್ ಮೇಲೆ ನಿಗಾ ಇಡಲು ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸರ್ಕಾರವು ಬಡ, ಮಧ್ಯಮ ವರ್ಗದವರಿಗೆ ಸುಲಭವಾಗಿ ಸಾಲ ಸಿಗುವಂತೆ ಮಾಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವಂತಾಗಬೇಕು. ಅಂದಾಗ ಮಾತ್ರ ಜನರು ಫೈನಾನತ್ತ ಹೋಗುವುದನ್ನು ಬಿಡುತ್ತಾರೆ ಎಂದು ಹೇಳಿದ್ದಾರೆ.
ಸರ್ಕಾರ ಕಠಿಣ ಕ್ರಮ ಕೈಗೊಂಡಷ್ಟು ಬಡವರಿಗೆ ಸಾಲ ಸಿಗದಂತಾಗುತ್ತದೆ.
ಬಡವರು ಬೀದಿಗೆ ಬಿದ್ದು, ಆತ್ಮಹತ್ಯೆಗಳು ಮತ್ತೆ ಹೆಚ್ಚಾಗುತ್ತವೆ. ಹೀಗಾಗಿ ಸರ್ಕಾರವು ಸುಲಭವಾಗಿ ಸಾಲ ಸಿಗುವಂತಯ ಪರ್ಯಾಯ ಯೋಜನೆಗಳನ್ನು ಜಾರಿಗೆ ತರಬೇಕು. ಪೊಲೀಸ್ ವ್ಯವಸ್ಥೆ ಮತ್ತು ಖಾಸಗಿ ಲೇವಾದೇವಿದಾರರ ನಡುವೆ ಒಳ ಒಪ್ಪಂದವಿದೆ. ಈಗ ಇದ್ದ ಕಾನೂನಿನಲ್ಲಿ ಮನಿಲೆಂಡರ್ಸ್ ನ್ನು ಬಂಧಿಸಬಹುದು. ಹತ್ತು ಸುಗ್ರೀವಾಜ್ಞೆ ಜಾರಿಗೆ ತಂದರೂ ಪ್ರಯೋಜನವಿಲ್ಲ ಎಂದಿದ್ದಾರೆ.