ಮೈಸೂರು: ಐತಿಹಾಸಿಕ ದಕ್ಷಿಣ ಭಾರತದ ಕುಂಭಮೇಳಕ್ಕೆ ಬರುವ ಭಕ್ತರನ್ನು ಗುಂಡಿಗಳೇ ಸ್ವಾಗತ ಮಾಡಬೇಕಿದೆ ಎಂದು ಹೋರಾಟಗಾರರು ವ್ಯಂಗ್ಯವಾಡಿ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಪ್ರಯಾಗ್ ರಾಜ್ ನ ಮಹಾ ಕುಂಭಮೇಳಕ್ಕೆ ದೇಶ ಸೇರಿದಂತ ವಿದೇಶದಿಂದ ಕೋಟ್ಯಾಂತರ ಭಕ್ತರು ಆಗಮಿಸಿ, ಪುಣ್ಯ ಸ್ನಾನ ಮಾಡಿದ್ದಾರೆ. ಅದೇ ರೀತಿ ದಕ್ಷಿಣ ಭಾರತದಲ್ಲಿ ಕೂಡ ಕುಂಭ ಮೇಳ ನಡೆಯುತ್ತದೆ. ಅದು ಕೂಡ ಕರ್ನಾಟಕದಲ್ಲಿ ಎನ್ನುವುದು ವಿಶೇಷ.
ಜಿಲ್ಲೆಯ ಟಿ.ನರಸೀಪುರದಲ್ಲಿ ಕುಂಭಮೇಳ ನಡೆಯುತ್ತದೆ. ಈ ಮೇಳಕ್ಕಾಗಿ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಇವೆ. ಆದರೆ, ಇನ್ನು ಕೂಡ ಜಿಲ್ಲಾಡಳಿತ ಸಿದ್ಧತಾ ಕಾರ್ಯ ಆರಂಭಿಸದಿರುವುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಟಿ. ನರಸೀಪುರ ಪಟ್ಟಣದಲ್ಲಿನ ರಸ್ತೆಗಳೆಲ್ಲ ಹಾಳಾಗಿ ಹೋಗಿವೆ. ರಸ್ತೆಯ ತುಂಬೆಲ್ಲ ಗುಂಡಿ ಬಿದ್ದಿವೆ. ಐತಿಹಾಸಿಕ ದಕ್ಷಿಣದ ಪ್ರಯಾಗ್ ರಾಜ್ ಎಂದೆ ಖ್ಯಾತಿ ಹೊಂದಿರುವ ಟಿ ನರಸೀಪುರ ಕುಂಭಮೇಳದಲ್ಲಿ ಭಾಗವಹಿಸಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಕಾವೇರಿ, ಕಪಿಲ, ಸ್ಪಟಿಕ ಸರೋವರಗಳ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಕ್ಕೆ ಬಂದು ಪುಣ್ಯಸ್ನಾನ ಮಾಡಿ ಹೋಗಲು ಜನರು ಕಾತುರದಿಂದ ಕಾಯುತ್ತಿದ್ದಾರೆ.
ಹೀಗಾಗಿ ಈ ಕುಂಭಮೇಳದಲ್ಲಿ ಭಾಗವಹಿಸಲು ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆ ಇದೆ. ಆದರೆ, ಜನಪ್ರತಿನಿಧಿಗಳು ಕನಿಷ್ಠ ಮೂಲಭೂತ ಸೌಕ್ರಯ ಕಲ್ಪಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಹೋರಾಟಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.