ಬೆಂಗಳೂರು: ರಾಜ್ಯದಲ್ಲಿ ಸದ್ಯದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು ಅಧಿಕೃತವಾಗಿ ಘೋಷಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದ ತಮ್ಮ ರಿಪೋರ್ಟ್ ಕಾರ್ಡ್ ಹೈಕಮಾಂಡ್ ನಾಯಕರಿಗೆ ಬಿ.ವೈ. ವಿಜಯೇಂದ್ರ ರವಾನೆ ಮಾಡಿದ್ದಾರೆ.
2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಕ್ಷೇತ್ರದ (Assembly Constituency)ಚುನಾವಣೆ ಮುಗಿದು 7 ತಿಂಗಳ ಬಳಿಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಗಮಿಸಿದ ಬಿ.ವೈ.ವಿಜಯೇಂದ್ರ, ಒಂದು ವರ್ಷದಲ್ಲಿ ತಾವು ಮಾಡಿರುವ ಸಾಧನೆಗಳೇನು? ಎಂಬುವುದನ್ನು ವರದಿಯ ರೂಪದಲ್ಲಿ ಹೈಕಮಾಂಡ್ ನಾಯಕರಿಗೆ ರವಾನಿಸಿದ್ದಾರೆ.
ತಮ್ಮ ವಿರೋಧಿ ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟ ಕಾರಣವನ್ನೇ ಮುಂದಿಟ್ಟುಕೊಂಡು, ಕಳೆದೊಂದು ವರ್ಷದಿಂದ ತಾವು ಮಾಡಿರುವ ಕೆಲಸ ಕಾರ್ಯಗಳನ್ನು ಪಟ್ಟಿ ಮಾಡಿ, ವರದಿ ರೂಪದಲ್ಲಿ ಹೈಕಮಾಂಡ್ ನಾಯಕರಿಗೆ ರವಾನೆ ಮಾಡಿದ್ದಾರೆ.
- ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಂಘಟನೆ.
- ರಾಜ್ಯಾದ್ಯಂತ ಕಳೆದೊಂದು ವರ್ಷದಲ್ಲಿ ಸುತ್ತಾಡಿರುವ ಕ್ಷೇತ್ರಗಳು.
- ರಾಜ್ಯದಲ್ಲಿ ಕೋರ್ ಕಮಿಟಿ ಸದಸ್ಯರುಗಳ ಜೊತೆಗೆ ನಡೆಸಿರುವ ಸಭೆಯ ವಿವರ.
- ರಾಜ್ಯದಲ್ಲಿ ಸಂಘಟನಾತ್ಮಕವಾಗಿ ನಡೆಸಿದ ಸಭೆಗಳು.
- ಪದಾಧಿಕಾರಿಗಳ ಕಾರ್ಯವೈಖರಿ ಹಾಗೂ ಅವರಿಗೆ ನೀಡಿರುವ ಮಾರ್ಗದರ್ಶನ.
ಹೀಗೆ ಹಲವು ವಿಚಾರಗಳ ಬಗ್ಗೆ ವರದಿಯಲ್ಲಿ ವಿಜಯೇಂದ್ರ ಉಲ್ಲೇಖಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ.