ಕೋಲಾರ: ನಾನು ಬಿ.ವೈ. ವಿಜಯೇಂದ್ರ ವಿರುದ್ಧ ಮಾತನಾಡುವುದಿಲ್ಲ. ಆದರೆ, ನನಗೂ ಬಿಜೆಪಿ ರಾಜ್ಯಾಧ್ಯಕ್ಷನಾಗುವ ಬಯಕೆ ಇದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮುಲು ಒಳ್ಳೆಯವನು ಪಕ್ಷಕ್ಕೆ ಬಂದರೆ ಒಳ್ಳೆಯದಾಗುತ್ತದೆ ಎಂದು ಭಾವಿಸುವವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಆ ಇಂತಹ ಸಂದರ್ಭಗಳು ರಾಜಕೀಯದಲ್ಲಿ ಬಂದೇ ಬರುತ್ತವೆ. ಸಂಕಷ್ಟಗಳು ಎದುರಾದಾಗ ಬೇರೆ ಪಕ್ಷದ ನಾಯಕರು ಸಂಪರ್ಕಿಸಿ ನೆರವಿನ ಅವಶ್ಯಕತೆಯಿದೆಯಾ ಅಂತ ಕೇಳುತ್ತಾರೆ. ಅವರಿಗೆ ತೊಂದರೆಯಾದಾಗ ನಾನು ಕೂಡ ಸಂಪರ್ಕಿಸಿದ್ದೇನೆ. ಆದರೆ, ನಾನು ಬಿಜೆಪಿಯಲ್ಲೇ ಇರುತ್ತೇನೆ. ನನಗೂ ರಾಜ್ಯಾಧ್ಯಕ್ಷನಾಗುವ ಬಯಕೆ ಇದೆ. ನಾನು ಹಾಗೂ ಯತ್ನಾಳ್ ಪಕ್ಷಕ್ಕೆ ಸಮಕಾಲಿನರು ಎಂದು ಹೇಳಿದ್ದಾರೆ.