ಬೆಂಗಳೂರು: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ಈಗ ಪ್ರಧಾನಿ ನರೇಂದ್ರ ಮೋದಿ ಕೈಯಲ್ಲಿದ್ದು, ದೆಹಲಿ ವಿಧಾನಸಭೆ ಫಲಿತಾಂಶದ (Delhi Assembly Results) ನಂತರ ಅದು ಸ್ಫೋಟವಾಗಲಿದೆ ಎನ್ನಲಾಗಿದೆ.
ರಾಜ್ಯಾಧ್ಯಕ್ಷನಾಗಿ ವಿಜಯೇಂದ್ರ (BY Vijayendra) ಮುಂದುವರಿಯಬೇಕಾ? ಅಥವಾ ಬೇಡವಾ? ಎಂಬುವುದನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ
ರಾಜ್ಯ ಬಿಜೆಪಿ (BJP) ಯಲ್ಲಿ ಬಣಗಳ ರಾಜಕೀಯ ದೊಡ್ಡ ಮಟ್ಟಕ್ಕೆ ಎದ್ದಿದೆ. ಇದು ಕಾರ್ಯಕರ್ತರ ಆತಂಕಕ್ಕೆ ಕಾರಣವಾಗುತ್ತಿದೆ. ಬಿಜೆಪಿ ಬಣಗಳು ಪರಸ್ಪರ ವಾಕ್ಸಮರ ನಡೆಸುತ್ತಿದ್ದು, ಹಾದಿ ಬೀದಿಯಲ್ಲಿ ನಿಂತು ಜಗಳ ಮಾಡುತ್ತಿದ್ದಾರೆ. ಇದು ಹೈಕಮಾಂಡ್ ತಲೆ ಬಿಸಿಗೆ ಕಾರಣವಾಗಿದೆ. ಹೀಗಾಗಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯ ವಿಚಾರವನ್ನು ರಾಷ್ಟ್ರೀಯ ಬಿಜೆಪಿ ನಾಯಕರು ಮೋದಿ ತೀರ್ಮಾನಕ್ಕೆ ಬಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೋದಿ ಆಯ್ಕೆಯೇ ಅಂತಿಮ ಎನ್ನಲಾಗಿದೆ.