ಮುಂಬಯಿ: ಬಾಲಿವುಡ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅವಘಡವೊಂದು ನಡೆದಿದ್ದು, ನಟ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಟ ಸೂರಜ್ ಪಾಂಚೋಲಿ ‘(Sooraj Pancholi)ಅವರು ಶೂಟಿಂಗ್ ಸಂದರ್ಭದಲ್ಲಿ ಸುಟ್ಟ ಗಾಯಗಳಿಂದಾಗಿ ಗಾಯಗೊಂಡಿದ್ದಾರೆ. ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹೀಗಾಗಿ ನಟ ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ತಂದೆ ಆದಿತ್ಯಾ ಪಾಂಚೋಲಿ(Aditya Pancholi) ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮುಂಬಯಿನ ಫಿಲ್ಮ್ ಸಿಟಿಯಲ್ಲಿ ‘ಕೇಸರಿ ವೀರ್: ಲೆಜೆಂಡ್ ಆಫ್ ಸೋಮನಾಥ್’(Kesari Veer: Legend of Somnath) ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿತ್ತು. ಈ ವೇಳೆ ಸೂರಜ್ ಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಅದಕ್ಕಾಗಿ ನಟ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಕಿಯ ಬಳಕೆಯನ್ನು ಒಳಗೊಂಡ ಚಿತ್ರೀಕರಣ ಇದಾಗಿದ್ದು, ಚಿತ್ರೀಕರಣದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಸೂರಜ್‌ಗೆ ಗಾಯಗಳಾಗಿವೆ. ಸೂರಜ್‌ಗೆ ಚಿಕಿತ್ಸೆ ನಡೆಯುತ್ತಿದೆ.