ಬೆಂಗಳೂರು: ಚಾಮರಾಜನಗರ (chamarajanagara) ಶಾಸಕ ಸಿ.ಪುಟ್ಟರಂಗಶೆಟ್ಟಿ (Puttarangashetty) ಅವರ ಆಪ್ತ ಸಹಾಯಕನ ಮನೆಯಲ್ಲಿ ಸಿಕ್ಕ ಲಕ್ಷಾಂತರ ರೂ. ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್(court) ಮರು ತನಿಖೆಗೆ ಆದೇಶ ನೀಡಿದೆ.
ಆಪ್ತ ಸಹಾಯಕ ಮೋಹನ್ ಕುಮಾರ್ ಬಳಿ 25.76 ಲಕ್ಷ ಹಣ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ (Lokayukta Special Court) ತನಿಖೆಯಲ್ಲಿ ಲೋಪದೋಷಗಳಿದ್ದು, ಮತ್ತೊಮ್ಮೆ ತನಿಖೆ ನಡೆಸುವಂತೆ ಆದೇಶ ನೀಡಿದೆ.
2019ರ ಜ. 4ರಂದು ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ ಆಪ್ತ ಸಹಾಯಕ ಮೋಹನ್ ಕುಮಾರ್(Mohan Kumar) 25.76 ಲಕ್ಷ ರೂ. ನಗದಿನೊಂದಿಗೆ ವಿಧಾನಸೌಧದ ಪೊಲೀಸರಿಗೆ(police) ಸಿಕ್ಕಿಬಿದ್ದಿದ್ದರು. ಘಟನೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಪ್ರಕರಣ ಕೈ ಬಿಡುವಂತೆ ಮೋಹನ್ ಅರ್ಜಿ ಸಲ್ಲಿಸಿದ್ದರು. ಈಗ ಕೋರ್ಟ್ ಅರ್ಜಿ ತಿರಸ್ಕರಿಸಿದೆ.
ಕಾಂಗ್ರೆಸ್-ಜೆಡಿಎಸ್ (Congress-JDS)ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಪುಟ್ಟರಂಗಶೆಟ್ಟಿ 2019ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದರು. 2019ರ ಜನವರಿ 4ರಂದು ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕ ಮೋಹನ್ ಕುಮಾರ್ ವಿಧಾನಸೌಧದಲ್ಲಿ ಹಣದೊಂದಿಗೆ ವಿಧಾನಸೌಧ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆ ವೇಳೆ ಪುಟ್ಟರಂಗಶೆಟ್ಟಿ ನನಗೆ ಹಾಗೂ ಆ ಹಣಕ್ಕೆ ಯಾವುದೇ ಸಂಬಂಧ ಇಲ್ಲ ಅಂತಾ ಹೇಳಿದ್ದರು.
ಸಚಿವರ ಕಚೇರಿಯಲ್ಲಿ ಅವರ ಹೆಸರಿನಲ್ಲಿ ಆಪ್ತ ಸಹಾಯಕ ಲಂಚದ ಹಣ (money)ಪಡೆದುಕೊಂಡಿದ್ದಾರೆ ಎಂಬುವುದು ಈಗ ತನಿಖೆಯಲ್ಲಿ ಬಹಿರಂಗವಾಗಿದೆ. ಸಚಿವರಿಗೆ ಅರಿವಿಲ್ಲದ ಹೀಗೆ ನಡೆಯುವುದು ಅಸಾಧ್ಯ ಎನ್ನುವುದು ಕೂಡ ಸಾಬೀತಾಗಿದೆ.