ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಗೌಡ ನಂತರ ಮತ್ತೋರ್ವ ಆರೋಪಿ ಮಹಾ ಕುಂಭ ಮೇಳಕ್ಕೆ ತೆರಳಲು ಅರ್ಜಿ ಸಲ್ಲಿಸಿದ್ದಾನೆ.
A 11 ನಾಗರಾಜು ಮಹಾ ಕುಂಭಮೇಳಕ್ಕೆ ತೆರಳಲು ಅರ್ಜಿ ಸಲ್ಲಿಕೆ ಮಾಡಿದ್ದಾನೆ. ಫ್ರೆಬವರಿ 7 ರಿಂದ 12 ತನಕ ಅನುಮತಿ ಕೋರಿ 57ನೇ ಸಿಸಿಹೆಚ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾನೆ. ಅಲ್ಲದೇ, ಕೇರಳದ ಶಿವವಾಲಯ ದೇವಸ್ಥಾನಕ್ಕೆ, ಫ್ರೆಬವರಿ 19 ರಿಂದ 21 ವರೆಗೆ ಮಂತ್ರಾಲಯಕ್ಕೆ ತೆರಳಲು ಅನುಮತಿ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾನೆ.
ನಾಗರಜ್ ಸಲ್ಲಿಸಿದ ಅರ್ಜಿಯನ್ನು 57ನೇ CCH ಕೋರ್ಟ್ ಪರಿಗಣಿಸಿದೆ. ಜಾಮೀನು ನೀಡುವ ವೇಳೆ ಹೈ ಕೋರ್ಟ್ ವಿಚಾರಧೀನ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳದಂತೆ ಷರತ್ತು ವಿಧಿಸಿತ್ತು. ಹೀಗಾಗಿ ಆರೋಪಿತರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.