ಬೆಂಗಳೂರು: ಪ್ರಾಣಿಗಳಿಗೆ ನೋವು ಹೇಳಿಕೊಳ್ಳಲು ಹೋಗುವುದಿಲ್ಲ. ಅದನ್ನು ನಾವು ಅರಿತು ನಡೆಯಬೇಕು ಎಂದು
ವಿಧಾನಸೌದ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ವಿಧಾನಸೌಧದ ವ್ಯಾಪ್ತಿಯಲ್ಲಿ ವಾಕಿಂಗ್ ಮಾಡುವಾಗ ನಾಯಿಗಳನ್ನು ಕಂಡು ಭಯಭೀತರಾಗುತ್ತಾರೆ. ಹೀಗಾಗಿ ನಾಯಿಗಳ ಹಾವಳಿ ಕುರಿತು ಚರ್ಚೆ ಮಾಡಿದೇವು. ಇದಕ್ಕೆ ಪರ- ವಿರೋದ ಎರಡು ಇದೆ. ನಾಯಿಗಳನ್ನು ಎಲ್ಲಿ ಬಿಡುತ್ತಾರೆ ಎಂದು ಚರ್ಚೆಯಾಯಿತು. ಈ ಹಿನ್ನೆಲೆಯಲ್ಲಿ ಇಂದು ಸಬೆ ನಡೆಸಲಾಯಿತು ಎಂದಿದ್ದಾರೆ.
ಸಭೆಯಲ್ಲಿ ಸಭಾಪತಿಗಳು, ಚೀಫ್ ಸೆಕ್ರೆಟರಿ, ಆರೋಗ್ಯ ಸಚಿವರು, ಡಿಪಿ ಆರ್, ಪೊಲೀಸ್, ಪಿಡಬ್ಲ್ಯೂ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ವಿಧಾನಸೌಧ ಆವರಣದಲ್ಲಿ ಸುಮಾರು 54 ನಾಯಿಗಳು ಇವೆ. ಮಳೆಗಾಲ, ಬಿಸಿಲು ಬಂದಾಗ ಶೆಲ್ಟರ್ ಎಲ್ಲಿ ಇರುತ್ತವೆ ಅಲ್ಲಿ ಹೋಗುತ್ತವೆ. ಹೀಗಾಗಿ ಅವುಗಳನ್ನು ಬೇರೆಕಡೆ ಶಿಫ್ಟ್ ಮಾಡಲು ಆಗುವುದಿಲ್ಲ. ವಿಧಾನಸೌದದ ಆವರಣದಲ್ಲಿ ಒಂದು ಸ್ಥಳ ನಿರ್ಮಾಣ ಮಾಡಬೇಕು ಎಂದು ನಿರ್ಧರಿಸಲಾಗಿದೆ ಎಂದು ಹೇಳಿದರು.
ಒಂದು ಎನ್ ಜಿಒದವರಿಗೆ ನಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನೀಡಿದರೆ, ಅವರು ನೋಡಿಕೊಳ್ಳುತ್ತಾರೆ. ಹೀಗಾಗಿ 15 ದಿನಗಳ ಒಳಗೆ ಟೆಂಡರ್ ಕರೆದು ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.