ಹುಬ್ಬಳ್ಳಿ: ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದಿರುವ ಘಟನೆ ನಗರದ ಟೌನ್ ಹಾಲ್ ಬಳಿ ನಡೆದಿದೆ.
ಅಂಗಡಿ ಮುಂದೆ ಆಟೋ ನಿಲ್ಲಸಬೇಡಿ ಎಂದಿದ್ದಕ್ಕೆ ಗುಂಪು ಕಟ್ಟಿಕೊಂಡು ಬಂದು ಆಟೋ ಚಾಲಕ ರೌಡಿಸಂ ಮಾಡಿದ್ದಾನೆ ಎನ್ನಲಾಗಿದೆ.
ಆಟೋ ಪಾರ್ಕ್ ಮಾಡಬೇಡಿ ಎಂದಿದ್ದಕ್ಕೆ ಗಂಪು ಕಟ್ಟಿಕೊಂಡು ಬಂದು ಆಟೋ ಚಾಲಕನಿಂದ ಹಲ್ಲೆ ನಡೆದಿದೆ. ನಗರದಲ್ಲಿನ ಸ್ತುತಿ ಆಟೋ ಸೀಟ್ ಕವರ್ ಅಂಗಡಿ ಮುಂದೆ ಡ್ರೈವರ್ ಆಟೋ ನಿಲ್ಲಿಸಿದ್ದ. ಆಗ ಅಂಗಡಿಯ ಮಾಲೀಕ ಆಟೋ ತೆಗೆಯಿರಿ ಎಂದು ಹೇಳಿದ್ದಾರೆ. ಆಗ ಸೀಟ್ ಕವರ್ ಶಾಪ್ ನ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ.
ಶಾಪ್ ಒಳಗೆ ನುಗ್ಗಿ ಹಲ್ಲೆ ಮಾಡಲಾಗಿದೆ. ಡೇವಿಡ್, ಅಭಿ, ಸುಮಂತ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ, ಶಾಪ್ ಮುಂದೆ ಇರುವ ಖುರ್ಚಿಗಳನ್ನು ಎತ್ತಿ ಹಾಕಿ ದರ್ಪ ಮೆರೆದಿದ್ದಾರೆ. ಈ ಘಟನೆಗೆ ಸಾರ್ವಜನಿಕರು ಕಿಡಿಕಾರಿದ್ದಾರೆ.