ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆರ್ ಟಿಓ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಟ್ಯಾಕ್ಸ್ ಕಟ್ಟದ ಐಷಾರಾಮಿ ಕಾರುಗಳ ಮಾಲೀಕರಿಗೆ ಶಾಕ್ ನೀಡಿದ್ದಾರೆ. ಅಲ್ಲದೇ, ಟ್ಯಾಕ್ಸ್ ಕಟ್ಟದ ಕಾರುಗಳನ್ನು ಸೀಜ್ ಮಾಡಿದ್ದಾರೆ.
ನಗರದಲ್ಲಿ ಆರ್ ಟಿಓ ಅಧಿಕಾರಿಗಳು 30ಕ್ಕೂ ಅಧಿಕ ಐಷಾರಾಮಿ ಕಾರುಗಳನ್ನು ಸೀಜ್ ಮಾಡಿದ್ದಾರೆ. ಬೇರೆ ಬೇರೆ ರಾಜ್ಯದಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಂಡು ಕರ್ನಾಟಕದಲ್ಲಿ ಅನಧಿಕೃತವಾಗಿ ಸಂಚಾರ ಮಾಡುತ್ತಿದ್ದ ಕಾರುಗಳನ್ನು ಸೀಜ್ ಮಾಡಿದ್ದಾರೆ.
ಕಾರುಗಳನ್ನು ಸೀಜ್ ಮಾಡಿದ್ದರಿಂದಾಗಿ ಮೂರು ಕೋಟಿ ರೂ.ನಷ್ಟು ತೆರಿಗೆ ವಸೂಲಿ ಆಗಲಿದೆ. ಮಸರಾಟಿ, ಫೆರಾರಿ, ಫೋರ್ಚೆ, ರೇಂಜ್ ರೋವರ್, ಬಿಎಂಡಬ್ಲೂ ಸೇರಿದಂತೆ ಐಷಾರಾಮಿ ಕಾರುಗಳನ್ನು ಸೀಜ್ ಮಾಡಲಾಗಿದೆ.
ದೆಹಲಿ, ಪಾಂಡಿಚೇರಿ, ಮಹಾರಾಷ್ಟ್ರ, ಉತ್ತರಪ್ರದೇಶ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ರಿಜಿಸ್ಟ್ರೇಷನ್ ಆಗಿದ್ದ ಟಾಪ್ ಎಂಡ್ ಕಾರುಗಳನ್ನೇ ಸೀಜ್ ಮಾಡಲಾಗಿದೆ.