ಬೆಂಗಳೂರು: ಬಹು ನಿರೀಕ್ಷಿತ ಟಾಕ್ಸಿಕ್ ಚಿತ್ರದ ಶೂಟಿಂಗ್ ನಲ್ಲಿ ಚಿತ್ರ ತಂಡ ಸಖತ್ ಬ್ಯೂಸಿಯಾಗಿದೆ.
ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಈಗ ಯಶ್ ಡೆಡಿಕೇಶನ್ ಬಗ್ಗೆ ಸುದ್ದಿಯೊಂದು ವೈರಲ್ ಆಗಿದ್ದು, ಅಭಿಮಾನಿಗಳು ಹ್ಯಾಟ್ಸಾಪ್ ಅಂತಾ ಹೇಳುತ್ತಿದ್ದಾರೆ.
ನಟ ಯಶ್, ಕಳೆದ ಒಂದು ವಾರದಿಂದ ಶೂಟಿಂಗ್ ಸೆಟ್ ನಲ್ಲೇ ಬಿಡಾರ ಹೂಡಿದ್ದಾರೆ. ಎಚ್ ಎಂಟಿ ಆವರಣದಲ್ಲಿ ಕಳೆದ ಒಂದು ವಾರದಿಂದ ಚಿತ್ರದ ಶೂಟಿಂಗ್ ನಡೆಯುತ್ತಿದೆ.
ಕಳೆದ ಒಂದು ವಾರದಿಂದ ಚಿತ್ರತಂಡ 12 ಗಂಟೆಗಳ ಕಾಲ ಶೂಟಿಂಗ್ ಮಾಡುತ್ತಿದೆ. ಬೆಳಗ್ಗೆ 9 ರಿಂದ ರಾತ್ರಿ 9ರ ವರೆಗೂ ನಿರ್ದೇಶಕಿ ಗೀತು ಮೋಹನ್ ದಾಸ್ ಕೆಲಸ ಮಾಡುತ್ತಿದ್ದಾರೆ. ರಾತ್ರಿ 9 ಗಂಟೆಯವರೆಗೆ ಶೂಟಿಂಗ್ ನಲ್ಲಿ ಬ್ಯೂಸಿಯಾಗಿ ಸೆಟ್ ನಲ್ಲೇ ಯಶ್ ನಿದ್ದೆ ಮಾಡುತ್ತಿದ್ದಾರೆ.
ರಾತ್ರಿ ಶೂಟಿಂಗ್ ಸೆಟ್ ನಲ್ಲೇ ನಿದ್ದೆ ಮಾಡಿ ಬೆಳಗ್ಗೆ ಶೂಟಿಂಗ್ ನಲ್ಲಿ ಯಶ್ ಭಾಗಿಯಾಗುತ್ತಿದ್ದಾರೆ. ಕಳೆದ ಮೂರು ದಿನಗಳಿಂದಲೂ ಪ್ಯಾನ್ ಇಂಡಿಯಾ ಸ್ಟಾರ್ ಯಶ್, ಕ್ಯಾರವಾನ್ ನಲ್ಲೇ ನಿದ್ದೆ ಮಾಡುತ್ತಿದ್ದಾರೆ. ಸದ್ಯ ಅವರು ಟಾಕ್ಸಿಕ್ ಸಿನಿಮಾಗಾಗಿ ಸಂಪೂರ್ಣವಾಗಿ ಶರಣಾಗಿದ್ದಾರೆ. ಕೆಜಿಎಫ್ ನಂತರ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಟಾಕ್ಸಿಕ್ ಸಿನಿಮಾದ ಶೂಟಿಂಗ್ ಇನ್ನೂ ನಡೆಯುತ್ತಿದೆ. ಈ ಸಂದರ್ಭದಲ್ಲೇ ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿದೆ. ಹೀಗಾಗಿ ಚಿತ್ರದ ಕುರಿತು ದೊಡ್ಡ ನಿರೀಕ್ಷೆ ಸೃಷ್ಟಿಯಾಗುತ್ತಿದೆ. ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಿಸಬಾರದು ಎಂಬ ಕಾರಣಕ್ಕೆ ಯಶ್ ಹಾಗೂ ತಂಡ ಸಾಕಷ್ಟು ಶ್ರಮ ಪಟ್ಟು ಚಿತ್ರ ನಿರ್ಮಾಣ ಮಾಡುತ್ತಿದೆ.