ಬೆಂಗಳೂರು: ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಸಾರಥಿಯನ್ನು ಆಯ್ಕೆ ಮಾಡಬೇಕೆಂದು ಪಟ್ಟು ಹಿಡಿದಿರುವ ಯತ್ನಾಳ್ ಅಂಡ್ ಟೀಂ, ಈಗಾಗಲೇ ಕೆಲವು ಸದಸ್ಯರನ್ನು ದೆಹಲಿಗೆ ಕಳುಹಿಸಿದೆ. ಶಾಸಕರಾದ ರಮೇಶ್ ಜಾರಕಿಹೊಳಿ,(Ramesh Jarakiholi) ಬಿ.ಪಿ. ಹರೀಶ್,(B.P. Harish) ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, (Kumar Bangarappa,) ಅರವಿಂದ ಲಿಂಬಾವಳಿ (Aravinda Limbavali) ದೆಹಲಿಗೆ ತೆರಳಿದ್ದು, ಇಂದು ಸಂಜೆ ಬೆಂಗಳೂರಿನಿಂದ ಯತ್ನಾಳ್ ಅತ್ತ ಪ್ರಯಾಣ ಬೆಳೆಸಲಿದ್ದಾರೆ.
ಇನ್ನು ದೆಹಲಿಯಲ್ಲಿ ಬೀಡು ಬಿಟ್ಟು, ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಉದ್ದೇಶದಿಂದಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯ ಬಿಜೆಪಿ ಘಟಕ ಚುನಾವಣಾಧಿಕಾರಿ ಗಣೇಶ್ ಕಾರ್ಣಿಕ್ (Ganesh Karnik) ಮೂಲಕ ಸಂಘಟನಾತ್ಮಕವಾದ 39 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಿಗೆ ಜಿಲ್ಲಾಧ್ಯಕ್ಷರ ನೇಮಕ ಮಾಡಿರುವ ಬಿಜೆಪಿ, ಸದ್ಯದಲ್ಲೇ ಚುನಾವಣೆ ನಡೆಸಲಿದೆ ಎಂಬ ಮಾಹಿತಿಯನ್ನು ಕೂಡ ಹೊರ ಹಾಕಿದೆ.
ದೆಹಲಿಯತ್ತ ನಾಯಕರುಗಳು ಮುಖ ಮಾಡುತ್ತಿದ್ದಂತೆ ಆಲರ್ಟ್ ಆಗಿರುವ ಬಿಜೆಪಿ ರಾಷ್ಟ್ರೀಯಾಧ್ಯಕ್ಷ, ಜೆ.ಪಿ.ನಡ್ಡಾ, ಸದ್ಯಕ್ಕೆ ಯಾರನ್ನು ಕೂಡ ಭೇಟಿ ಮಾಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.