ಬೆಂಗಳೂರು: ಉತ್ತರಪ್ರದೇಶದ ಪ್ರಯಾಗ್ ರಾಜ್(Prayag Raj, Uttar Pradesh) ನಲ್ಲಿ ನಡೆಯುತ್ತಿರುವ ಕುಂಭಮೇಳದ ಮಾದರಿಯಲ್ಲಿಯೇ ರಾಜ್ಯದಲ್ಲೂ ನಡೆಸಲು ಸರ್ಕಾರ ಸನ್ನದ್ಧವಾಗಿದೆ. ಕಾವೇರಿ, ಕಬಿನಿ ಹಾಗೂ ಸ್ಫಟಿಕ ಸರೋವರದ ತ್ರಿವೇಣಿ ಸಂಗಮವನ್ನು ಕುಂಭಮೇಳದ ಆಚರಣೆಗೆ ಬಳಕೆ ಮಾಡಿಕೊಳ್ಳಲು ಸರ್ಕಾರ ತೀರ್ಮಾನ ಮಾಡಿದೆ.
ಈ ಬಾರಿ ಮೈಸೂರು ಜಿಲ್ಲೆಯ ತಿರುಮಕೂಡಲು ಬಳಿ ತ್ರಿವೇಣಿ ಸಂಗಮವನ್ನು(Triveni Sangam) ಕುಂಭಮೇಳದ ಸ್ಥಳವಾಗಿ ಮಾಡಲು ಸರ್ಕಾರದ ಮುಜರಾಯಿ ಇಲಾಖೆ(Mujarai Department of Govt) ನಿರ್ಧರಿಸಿದ್ದು, ಫೆಬ್ರವರಿ 10 ರಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.
ಇತ್ತ ಕಾರ್ಯಕ್ರಮಕ್ಕೆ ಮುಜರಾಯಿ ಇಲಾಖೆ 6 ಕೋಟಿ ರೂ. ಬಿಡುಗಡೆ ಮಾಡಿದೆ. ಕಾರ್ಯಕ್ರಮದ ಉಸ್ತುವಾರಿಯನ್ನು ಸಚಿವ ಹೆಚ್.ಸಿ ಮಹಾದೇವಪ್ಪರ ಹೆಗಲಿಗೆ ಸರ್ಕಾರ ವಹಿಸಿದೆ.