ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಿಂದಿ ಭಾಷಿಗರ(Hindi speakers) ಪುಂಡಾಟ ಕಡಿಮೆಯಾಗುತ್ತಿಲ್ಲ. ಕನ್ನಡದ ನೆಲಕ್ಕೆ ದುಡಿಯಲು ಬಂದು ಕನ್ನಡಿಗರ ಮೇಲೆಯೇ ದಬ್ಬಾಳಿಕೆ ನಡೆಸುತ್ತಿರುವ ಹಲವಾರು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿವೆ. ಈಗ ಮತ್ತೆ ಅಂತಹ ಪ್ರಕರಣ(case) ಬೆಳಕಿಗೆ ಬಂದಿದೆ.
ಕನ್ನಡ ಮಾತನಾಡು ಎಂದಿದ್ದಕ್ಕೆ ಹಿಂದಿ ಭಾಷಿಕ ಪುಂಡರು ಹಲ್ಲೆ ಮಾಡಿದ್ದಾರೆ. ನಾಲ್ಕೈದು ಹಿಂದಿ ಯುವಕರು ಸೇರಿಕೊಂಡು ಕನ್ನಡಿಗನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ್ದಲ್ಲದೇ ಹೋಟೆಲ್ (hotel)ನಿಂದ ಕನ್ನಡಿಗನನ್ನು ಹೊರ ದಬ್ಬಿದ್ದಾರೆ. ಚಿಕ್ಕಬಾಣವಾರದ ಗಬ್ರು ಹೋಟೆಲ್ ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ(social media)) ವಿಡಿಯೋ ವೈರಲ್ ಆಗಿದೆ. ಇದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.