ಚಾಮರಾಜನಗರ: ವೈದ್ಯರ ಯಡವಟ್ಟಿಗೆ 6 ತಿಂಗಳ ಮಗು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯ ವೈದ್ಯನೊಬ್ಬನ ಯಡವಟ್ಟಿನಿಂದಾಗಿ 6 ತಿಂಗಳ ಮಗು ಸಾನವ್ನಪ್ಪಿದೆ.
ಜಿಲ್ಲೆಯ ಹಂಗಳ ಗ್ರಾಮದ ನಿವಾಸಿಗಳಾದ ಆನಂದ್ ಮತ್ತು ಶುಭಮಾನಸ ದಂಪತಿಯ ಆರು ತಿಂಗಳ ಮಗು ಪ್ರಖ್ಯಾತ್ ಗೆ ಇಂದು ಕಿವಿ ಚುಚ್ಚಿಸುವುದಕ್ಕೆ ಕುಟುಂಬಸ್ಥರು ಮುಂದಾಗಿದ್ದರು. ಚಿಕ್ಕ ಮಗುವಿಗೆ ನೋವು ಆಗಬಾರದು ಎಂಬ ಕಾರಣಕ್ಕೆ ಬೋಮ್ಮಲಾಪೂರ ಸರ್ಕಾರಿ ಆಸ್ಪತ್ರೆಗೆ ಮಗುವನ್ನ ಕರೆದುಕೊಂಡು ಹೋದ ಪೋಷಕರು ಕಿವಿಗೆ ಅನಸ್ತೀಷಿಯಾ ಕೊಡಿಸಿದ್ದಾರೆ. ಈ ಇಂಜೆಕ್ಷನ್ ನೀಡಿದ ಕೂಡಲೇ ಮಗುವಿಗೆ ರಿಯಾಕ್ಷನ್ ಆಗಿದೆ. ಆಗ ಮಗುವಿಗೆ ಇದ್ದಕ್ಕಿದ್ದಂತೆ ಪಿಡ್ಸ್ ಬಂದಿದೆ. ಕೂಡಲೇ ಗಾಬರಿಗೊಂಡ ಪೋಷಕರು ಬೋಮ್ಮಲಾಪುರ ಸರ್ಕಾರಿ ಆಸ್ಪತ್ರೆಯಿಂದ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಮಗು ಸಾವನ್ನಪ್ಪಿದೆ.
ಓವರ್ ಡೋಸ್ ನೀಡಿದ್ದರಿಂದಾಗಿ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹೀಗಾಗಿ ಆಸ್ಪತ್ರೆ ರಣರಂಗವಾಗಿತ್ತು. ಪಿಹೆಚ್ಸಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗುಂಡ್ಲುಪೇಟೆ ತಾಲೂಕು ವೈದ್ಯಾಧಿಕಾರಿ ಡಾ.ಅಲಂಪಾಷಾ ಹೇಳಿದ್ದಾರೆ.