ನವದೆಹಲಿ: ಮಹಾ ಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತ (Maha Kumbh stampede) ಪ್ರಕರಣ ಮತ್ತೊಂದು ಹೊಸ ಹುಟ್ಟು ಪಡೆದಿದೆ. ಘಟನೆಯಲ್ಲಿ 1 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge)ಆರೋಪಿಸಿದ್ದಾರೆ.
ಆ ಪ್ರಕರಣದ ಕುರಿತು ವರದಿ ಬಿಡುಗಡೆ ಮಾಡಬೇಕು. ನಾನು ಸತ್ಯವಾದ ಅಂಕಿ- ಅಂಶ ಹೇಳಿದ್ದೇನೆ. ತುಂಬಾ ಜನರು ಅಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ನಾನು ಹೇಳಿದ್ದು, ಸುಳ್ಳಾದರೆ, ಕನಿಷ್ಠ ಅಲ್ಲಿ ಆಗಿರುವ ಸಾವು-ನೋವುಗಳ ಸಂಖ್ಯೆಯ ನಿಜವಾದ ವರದಿ ಬಹಿರಂಗೊಳಿಸಿ ಎಂದು ಆಗ್ರಹಿಸಿದರು.
ರಾಜ್ಯಸಭೆಯಲ್ಲಿಂದು (Rajya sabha) ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ಕುರಿತು ಮಾತನಾಡಿದ್ದಾರೆ. ಈ ವೇಳೆ ಸಭಾಪತಿ ಜಗದೀಪ್ ಧನಕರ್ (Jagdeep Dhankhar) ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಸೂಚಿಸಿದರು. ಆಗ ನಿಖರವಾದ ವರದಿ ಕೊಡುವಂತೆ ಖರ್ಗೆ ಹೇಳಿದರು. ಈ ಸಂದರ್ಭದಲ್ಲಿ ಗದ್ದಲ ಉಂಟಾಯಿತು.