ಬೆಂಗಳೂರು: ಸಿಎಂ ಕನಸಿನ ಕೂಸಿಗೆ ವಿಘ್ನ ಎದುರಾಗಿದೆ. ಸಿಎಂ ಕನಸಿನ ಕೂಸಾಗಿರುವ ಇಂದಿರಾ ಕ್ಯಾಂಟೀನ್ ಕಟ್ಟಲು ಗುತ್ತಿಗೆದಾರರ ಕೊರತೆ ಎದುರಾಗಿದೆ.
ಇಂದಿರಾ ಕ್ಯಾಂಟೀನ್ (Indira Canteen) ಕಟ್ಟಲು ಯಾರೂ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಹೊಸ ಇಂದಿರಾ ಕ್ಯಾಂಟೀನ್ ಗಳು ಪಾಲಿಕೆಗೆ ದೊಡ್ಡ ಟೆನ್ಶನ್ ತಂದಿವೆ.
ಇಂದಿರಾ ಕ್ಯಾಂಟೀನ್ ಕಟ್ಟುವುದಕ್ಕಾಗಿ ಬಿಬಿಎಂಪಿಯಿಂದ ಟೆಂಡರ್ ಕರೆದರೂ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಬಿಬಿಎಂಪಿ ಇತ್ತೀಚೆಗೆ ನೂತನವಾಗಿ 52 ಹೊಸ ಇಂದಿರಾ ಕ್ಯಾಂಟೀನ್ ಗಳನ್ನು ನಿರ್ಮಿಸಲು ಟೆಂಡರ್ ಕರೆದಿತ್ತು. ಆದರೆ, ಗುತ್ತಿಗೆದಾರರು ಮಾತ್ರ ಮುಂದೆ ಬರುತ್ತಿಲ್ಲ. ಹೀಗಾಗಿ ಟೆಂಡರ್ ನಲ್ಲಿ ಮತ್ತಷ್ಟು ಸಡಿಲಗೊಳಿಸಲು ಬಿಬಿಎಂಪಿ ಮುಂದಾಗಿದೆ. ಕೆಲವು ವಿಷಯಗಳನ್ನು ಸಡಿಲಗೊಳಿಸಿ ಎರಡನೇ ಬಾರಿಗೆ ಟೆಂಡರ್ ಕರೆಯಲು ಪಾಲಿಕೆ ಮುಂದಾಗಿದೆ.