ರಾಯಚೂರು: ದೇವದಾಸಿಯರ ಜಮೀನಿಗೆ ಕನ್ನ (Land grabbing) ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಬಸವರಾಜ್ ದಡೇಸಗೂರ್ (Former MLA Basavaraj Dadesagur) ಗೆ ಬಂಧನ ಭೀತಿ ಶುರುವಾಗಿದೆ.
ದೇವದಾಸಿಯರ ಜಮೀನನ್ನು ಕಬ್ಜಾ ಮಾಡಿರುವುದನ್ನು ಪ್ರಶ್ನಿಸಿದ್ದಕ್ಕೆ ದಡೇಸಗೂರ್ ಬೆಂಬಲಿಗರು ಹಲ್ಲೆ ಮಾಡಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಈ ಕುರಿತು ಸಿಂಧನೂರು (Sindhanur) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಕೂಡ ದಾಖಲಾಗಿತ್ತು. ಹೀಗಾಗಿಯೇ ಮಾಜಿ ಶಾಸಕರಿಗೆ ಬಂಧನ ಭೀತಿ ಶುರುವಾಗಿದೆ.
ಮಾಜಿ ಶಾಸಕರ ವಿರುದ್ಧ ದೇವದಾಸಿ ಆಲಮಮ್ಮ ಹಾಗೂ ಆಕೆಯ ಪುತ್ರ ಆಲಮಪ್ಪ ದೂರು ಸಲ್ಲಿಸಿದ್ದರು. ಹೀಗಾಗಿ ಎಫ್ ಐಆರ್ ದಾಖಲಾಗಿತ್ತು. ಆದರೆ, ಮಾಜಿ ಶಾಸಕ ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಮಾಜಿ ಶಾಸಕ ಬಸವರಾಜ್ ದಡೇಸಗೂರ್ ಬಂಧಿಸಲು ನಾಲ್ಕು ತಂಡಗಳಾಗಿ ಹುಡುಕಾಟ ನಡೆಸಿದ್ದಾರೆ. ಧಾರವಾಡದಲ್ಲಿ ಪೊಲೀಸರಿಂದ ದಡೇಸಗೂರು ಜಸ್ಟ್ ಮಿಸ್ ಆಗಿದ್ದರು.
ಆಗ ಧಾರವಾಡದಿಂದಲೇ ಕಾರು ಚಾಲಕನನ್ನು ಭಾನುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಕಾರು ಚಾಲಕ ಪ್ರಕರಣದಲ್ಲಿ A5 ಆರೋಪಿಯಾಗಿರುವ ಶಾಮಿದ್. ಬಸವರಾಜ್ ದಡೇಸಗೂರು A1, ಇಬ್ಬರು ಪುತ್ರರಾದ ಸೂರ್ಯA2, ಚಂದ್ರ A3 ಹಾಗೂ ಮೌನೇಶ್ A4 ಆರೋಪಿಗಳಾಗಿದ್ದಾರೆ. ಇವರು ಸೇರಿದಂತೆ ಒಟ್ಟು 8 ಜನ ಆರೋಪಿಗಳಿದ್ದಾರೆ.