ಬೆಂಗಳೂರು: ಡ್ರಂಕ್ ಆಂಡ್ ಡ್ರೈವ್ (Drunk & Drive) ವಿರುದ್ಧ ಸಂಚಾರಿ ಪೊಲೀಸರು(police) ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದ ಒಂದು ವಾರದಿಂದ ನಗರದಾದ್ಯಂತ ಸಂಚಾರಿ ಪೊಲೀಸರು ಹೆಚ್ಚು ತಪಾಸಣೆ ನಡೆಸುತ್ತಿದ್ದಾರೆ. ಕಳೆದ ಜ. 27 ರಿಂದ ಫೆಬ್ರವರಿ 2ರ ವರೆಗೂ ಬೆಂಗಳೂರಿನ 50 ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಡ್ರಂಕ್ & ಡ್ರೈವ್ ಪರಿಶೀಲನೆ ಹೆಚ್ಚು ಮಾಡಲಾಗಿದೆ.
ಈ ಅವಧಿಯಲ್ಲಿ ಕಾರು, ಬೈಕ್ ಸೇರಿದಂತೆ ಸುಮಾರು 62,300 ವಾಹನ ಸವಾರರ ಡಿಡಿ ತಪಾಸಣೆ ನಡೆಸಲಾಗಿದೆ. ಸುಮಾರು 800 ವಾಹನ ಸವಾರರು ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ನಗರದಲ್ಲಿ ಕಳೆದೊಂದು ವಾರದಲ್ಲಿ 800 ವಾಹನ ಸೀಜ್ ಮಾಡಿ, 80 ಲಕ್ಷ ರೂ. ಫೈನ್ ನ್ನು ಸಂಚಾರಿ ಪೊಲೀಸರು ಹಾಕಿದ್ದಾರೆ ಎಂದು ಸಂಚಾರಿ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ಮಾಹಿತಿ ನೀಡಿದ್ದಾರೆ.