ಚಂಡೀಗಢ : ಹರಿಯಾಣದ (Haryana) ಫತೇಹಾಬಾದ್ನಲ್ಲಿ ಶುಕ್ರವಾರ ತಡರಾತ್ರಿ 14 ಜನರನ್ನು ಹೊತ್ತೊಯ್ಯುತ್ತಿದ್ದ ವಾಹನವೊಂದು ನೀರು ಕಾಲುವೆಗೆ ಉರುಳಿದ ಪರಿಣಾಮ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಆರಂಭವಾಗಿದೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಜಗದೀಶ್ ಚಂದ್ರ,(Jagdish Chandra,) ಪಂಜಾಬ್ನ ಫಜಿಲ್ಕಾದಲ್ಲಿ(Fazilka of Punjab) ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ವಾಹನ ಫತೇಹಾಬಾದ್ನಲ್ಲಿ ಕಾಲುವೆಗೆ ಉರುಳಿದೆ. 14 ಜನರಲ್ಲಿ 6 ಮೃತದೇಹಗಳು ಪತ್ತೆಯಾಗಿದ್ದು, 2 ಮಂದಿಗೆ ಗಂಭೀರ ಗಾಯಗಳಾಗಿದ್ದು, ಇನ್ನು 6 ಜನ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. NDRF ಮತ್ತು SDRF ತಂಡಗಳು ಸದ್ಯ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದ್ದಾರೆ.
ನೀರಾವರಿ ಇಲಾಖೆಯೊಂದಿಗೆ ಮಾತನಾಡಿದ್ದೇನೆ , ಕಾಲುವೆಯ ಸುತ್ತಲೂ ಶಾಶ್ವತ ಬ್ಯಾರಿಕೇಡ್ಗಳನ್ನು ನಿರ್ಮಿಸಲು ಯೋಜನೆ ಮಾಡಲಿದ್ದೇವೆ. ಸದ್ಯಕ್ಕೆ ನಾವು ತಾತ್ಕಾಲಿಕ ಸುರಕ್ಷತಾ ಬ್ಯಾರಿಕೇಡ್ ಅನ್ನು ಅಳವಡಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಮೃತಪಟ್ಟವರಲ್ಲಿ 1.5 ತಿಂಗಳ ಶಿಶು ಮತ್ತು 10 ವರ್ಷದ ಹೆಣ್ಣು ಮಗು ಕೂಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.