ಬೆಂಗಳೂರು: “1990s” ಚಿತ್ರದ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಮಳೆ ಹನಿಯೆ ಎಂಬ ಹಾಡಿಗೆ ಗಾಯಕಿ ಕೆ.ಎಸ್. ಚಿತ್ರ ಧ್ವನಿ ನೀಡಿದ್ದಾರೆ. ಈ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
“1990s” ಚಿತ್ರವು ಮನಸ್ಸು ಮಲ್ಲಿಗೆ ಕಂಬೈನ್ಸ್ ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ನಂದಕುಮಾರ್ ಸಿ.ಎಂ ಚಿತ್ರಕ್ಕಾಗಿ ಕ್ಯಾಪ್ ತೊಟ್ಟಿದ್ದಾರೆ. ಅರುಣ್ ನಾಯಕನಾಗಿ ಹಾಗೂ ರಾಣಿ ವರದ್ ನಾಯಕಿಯಾಗಿ ನಟಿಸಿದ್ದಾರೆ. ಮೋಹಿನಿ ಹಾಗೂ ಮಂಜು ಅವರು ಬರೆದಿರುವ “ಮಳೆ ಹನಿಯೆ” ಎಂಬ ಹಾಡು ಇತ್ತೀಚಿಗೆ ಬಿಡಯಾಗಿದೆ.
ಹಿರಿಯ ಕಲಾ ನಿರ್ದೇಶಕ ಕನಕರಾಜ್ ಈ ಹಾಡನ್ನು ಅನಾವರಣ ಮಾಡಿದರು. ಭಾರತದ ಜನಪ್ರಿಯ ಗಾಯಕಿ ಕೆ.ಎಸ್. ಚಿತ್ರ ಗಾಯನದಲ್ಲಿ ಈ ಹಾಡು ಮೂಡಿ ಬಂದಿದೆ. ಮಹಾರಾಜ ಈ ಮನಮೋಹಕ ಹಾಡಿಗೆ ಸಂಗೀತ ನೀಡಿದ್ದಾರೆ.
ಈ ವೇಳೆ ಮಾತನಾಡಿರುವ ಸಿ.ಎಂ. ನಂದಕುಮಾರ್, “1990”s ಚಿತ್ರ ಮೊದಲೆ ಹೇಳಿದಂತೆ 90 ರ ಕಾಲಘಟ್ಟದ ಪ್ರೇಮ ಕಥಾನಕ. ಈ ಚಿತ್ರದಲ್ಲಿ ಮಹಾರಾಜ ಅವರು ಸಂಗೀತ ನೀಡಿರುವ ಎಲ್ಲಾ ಹಾಡುಗಳು ಅದ್ಭುತವಾಗಿದೆ. ಇಂದು ಬಿಡುಗಡೆಯಾಗಿರುವ ” ಮಳೆ ಹನಿಯೆ” ಹಾಡನ್ನು ಚಿತ್ರ ಅವರ ಧ್ವನಿಯಲ್ಲಿ ಕೇಳುವುದೆ ಸೊಗಸು ಎಂದು ಹೇಳಿದ್ದಾರೆ. ಲಹರಿ ಮ್ಯೂಸಿಕ್ ಮೂಲಕ “ಮಳೆ ಹನಿಯೇ” ಹಾಡು ಬಿಡುಗಡೆಯಾಗಿದೆ.