ನವದೆಹಲಿ: ಉದ್ಯಮಿಗಳ ಜತೆಗೆ ಮಧ್ಯಮ ವರ್ಗದವರು, ರೈತರನ್ನು ಹೆಚ್ಚಾಗಿ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಬಜೆಟ್ (Union Budget 2025) ಮಂಡಿಸಿದೆ. ಅದರಲ್ಲೂ, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12.75 ಲಕ್ಷ ರೂ.ಗೆ (75 ಸಾವಿರ ಸ್ಟಾಂಡರ್ಡ್ ಡಿಡಕ್ಷನ್) ಏರಿಕೆ ಮಾಡಿರುವುದು ಸಂಬಳದಾರರಿಗೆ ಬಂಪರ್ ನ್ಯೂಸ್ ಆಗಿದೆ. ಇನ್ನು, ಬಜೆಟ್ ಬಳಿಕ ಯಾವುದು ಅಗ್ಗವಾಗಿದೆ? ಯಾವುದು ತುಟ್ಟಿಯಾಗಿದೆ? ಇಲ್ಲಿದೆ ಪಟ್ಟಿ.
ಯಾವುದು ಅಗ್ಗ?
ಕ್ಯಾಪಿಟಲ್ ಗೂಡ್ಸ್ ಗೆ (Capital Goods) ವಿನಾಯಿತಿ ನೀಡಿದ ಕಾರಣ ಮೊಬೈಲ್ ಗಳು ಅಗ್ಗವಾಗಲಿವೆ
36 ಜೀವ ಉಳಿಸುವ ಔಷಧಗಳು
ಇವಿ ಬ್ಯಾಟರಿಗಳು
ವೆಟ್ ಬ್ಲ್ಯೂ ಲೆದರ್
ಓಪನ್ ಸೆಲ್
ಎಲ್ಇಡಿ/ಎಲ್ ಸಿಡಿ
ವೈದ್ಯಕೀಯ ಉಪಕರಣಗಳು
ಲೀಥಿಯಂ ಐಯಾನ್ ಬ್ಯಾಟರಿಗಳು
ಯಾವುದು ತುಟ್ಟಿ?
-ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ
ಹೆಣೆದ ಬಟ್ಟೆಗಳು