ಬೆಂಗಳೂರು: ಆಸ್ತಿ ತೆರಿಗೆ ಕಟ್ಟದ ಕಟ್ಟಡಗಳ ಹರಾಜಿಗೆ ಸಮರ ಸಾರಿರುವ ಬಿಬಿಎಂಪಿ, ಮಹಾದೇವಪುರ ವಲಯದ 60 ಅಸ್ತಿಗಳ ಹರಾಜಿಗೆ ನೋಟಿಸ್ ನೀಡಿದೆ.
ಮಹಾದೇವಪುರ ವಲಯದ ವೈಟ್ ಫೀಲ್ಡ್, ಕೆ.ಅರ್ ಪುರಂ, ಎಚ್ ಎಎಲ್, ಮಾರತಹಳ್ಳಿ, ಹೂಡಿಯಲ್ಲಿರುವ ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಬಾಕಿ ತೆರಿಗೆ ಕಟ್ಟದ ಕಟ್ಟಡಗಳಿಗೆ ಬಿಬಿಎಂಪಿ ನೋಟಿಸ್ ನೀಡಲಾಗಿದೆ. ಫೆ. 13ರಂದು ಮಧ್ಯಾಹ್ನ 12ಕ್ಕೆ ಈ ಕಟ್ಟಡಗಳನ್ನು ಹರಾಜು ಮಾಡಲಾಗುವುದು ಎಂದು ಸೂಚಿಸಲಾಗಿದೆ.
ಕೇವಲ 9 ಸಾವಿರ ಬಾಕಿ ತೆರಿಕೆ ಉಳಿಸಿಕೊಂಡ ಕಟ್ಟಡಕ್ಕೂ ಹರಾಜು ನೋಟಿಸ್ ನೀಡಲಾಗಿದೆ. ಎಚ್ ಎಎಲ್ ವ್ಯಾಪ್ತಿಯ ರಾಜೀವ್ ನಾರಾಯಣ ಅವರು 9.886 ರೂ. ಬಾಕಿ ತೆರಿಗೆ ಉಲಿಸಿಕೊಂಡಿರುವ ಕಟ್ಟಡ ಮಾಲೀಕರು. ಆದರೂ ಅವರಿಗೂ ನೋಟಿಸ್ ನೀಡಲಾಗಿದೆ. ಇನ್ನುಳಿದಂತೆ 30 ಲಕ್ಷ ರೂ.ಗೂ ಅಧಿಕ ಕಟ್ಟಡ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಫೆ. 10ರೊಳಗೆ ಬಾಕಿ ತೆರಿಗೆ ಕಟ್ಟದಿದ್ದರೆ ಫೆ. 12ರಂದು ಕಟ್ಟಡ ಹರಾಜು ಮಾಡಲಾಗುವುದು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.