ಬೆಂಗಳೂರು: ಮುಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಹಗರಣ ಹೊರ ಬಿದ್ದಿದೆ. ಈಗಾಗಲೇ ಲೋಕಾಯುಕ್ತ ಅಧಿಕಾರಿಗಳ ತನಿಖಾ ವರದಿ ಸಿದ್ಧವಾಗಿದ್ದು, ಹೈಕೋರ್ಟ್ ನಲ್ಲಿ ಸಿಬಿಐ ತನಿಖೆಗೆ ನೀಡುವ ಅರ್ಜಿ ಆದೇಶ ಕಾಯ್ದಿರಿಸಲಾಗಿದೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂಬ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ.
ಇಡಿ, ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಭಾಗಿಯಾಗಿದ್ದಾರೆಂಬುವುದನ್ನು ಬಯಲು ಮಾಡಿದ್ದಾರೆ. ಇಡಿ ಸಿದ್ದಪಡಿಸಿರುವ ವರದಿಯಲ್ಲಿ ಮನಿಲ್ಯಾಂಡ್ರಿಂಗ್ ಕುರಿತ ಸಂಪೂರ್ಣ ವಿವರವನ್ನು ನೀಡಲಾಗಿದೆ. ಅಲ್ಲದೇ, ಪಾರ್ವತಿ ಅವರಿಗೆ 14 ಸೈಟ್ ಬಂದಿದ್ದರ ಕುರಿತು ಸಂಪೂರ್ಣ ಮಾಹಿತಿ ಉಲ್ಲೇಖಿಸಲಾಗಿದೆ.
ಇಡಿ ತನಿಖೆಯಲ್ಲಿ ಬಹಿರಂಗವಾಗಿರುವ ಮಾಹಿತಿ…
- ಕೆಸರೆ ಗ್ರಾಮದ 3 ಎಕರೆ 26 ಗುಂಟೆ ಜಮೀನನ್ನು ಮುಡಾ 3.24 ಲಕ್ಷ ರೂ ವಶಪಡಿಸಿಕೊಂಡಿದೆ.
- ತಪ್ಪು ಮಾಹಿತಿ ಹಾಗೂ ಪ್ರಭಾವದಿಂದಾಗಿ ಡಿನೋಟಿಫಿಕೇಷನ್ ಕೈಬಿಡಲಾಗಿದೆ.
- ಮುಡಾ ಸೈಟ್ ಮಾಡಿ ಮಾರಾಟ ಮಾಡಿದ್ದ ಜಾಗವನ್ನು ಮಲ್ಲಿಕಾರ್ಜುನ ಸ್ವಾಮಿಯಿಂದ ಖರೀದಿ ಮಾಡಲಾಗಿದೆ. ಆದರೆ, ಮಲ್ಲಿಕಾರ್ಜುನ ಸ್ವಾಮಿ ಖರೀದಿ ಮಾಡಿದಾಗ ಮುಡಾ ಯಾವುದೇ ಆಕ್ಷೇಪ ಮಾಡಿಲ್ಲ.
- ಮುಡಾದಿಂದ ತಪ್ಪು ವರದಿ ಆಧರಿಸಿ ಮಲ್ಲಿಕಾರ್ಜುನ ಸ್ವಾಮಿ ಭಾಗವನ್ನು ರೆಸಿಡೆನ್ಸಿಯಲ್ ಜಾಗವಾಗಿ ಮಾರ್ಪಾಡು ಮಾಡಲಾಗಿದೆ.
- ರಾಜಕೀಯ ಪ್ರಭಾವದಿಂದಾಗಿ ಐಷಾರಾಮಿ ಬಡಾವಣೆಯಲ್ಲಿ ಬದಲಿ ಸೈಟ್ ಪಡೆದ ಬಿ.ಎಂ. ಪಾರ್ವತಿ.
- ಮುಡಾದಿಂದ ಕಾನೂನು ಬಾಹಿರವಾಗಿ ಪರಿಹಾರ ಸೈಟ್ ಪಡೆಯಲಾಗಿದೆ.
- ಮುಡಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸೈಟ್ ಪಡೆಯಲಾಗಿದೆ. ಡಿ.ಬಿ. ನಟೇಶ್ ಮುಡಾ ಆಯುಕ್ತರಾಗಿದ್ದ ವೇಳೆಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ.
- ಇಡಿ ತನಿಖೆಯಲ್ಲಿ ಪಿಎಂಎಲ್ಎ ಕಾಯಿದೆ ಸೆ. 3ಅಡಿ ಮನಿಲ್ಯಾಂಡ್ರಿಂಗ್ ನಡೆದಿರುವುದು ಸ್ಷಷ್ಡವಾಗಿದೆ.
ಇಡಿ ತನಿಖೆಯಲ್ಲಿ ಸಿದ್ದರಾಮಯ್ಯ, ಬಿ.ಎಂ. ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜೆ.ದೇವರಾಜು ಆರೋಪಿಗಳಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.