!
ಬೆಂಗಳೂರು: ನಯವಂಚಕಿಯ ವಂಚನೆಯ ಪ್ರಕರಣಗಳು ಒಂದೊಂದಾಗಿ ಬಯಲಿಗೆ ಬರುತ್ತಿದ್ದು, ಪ್ರಕರಣಗಳ ಬಗ್ಗೆ ಕೇಳಿ ಜನರು ಬೆಚ್ಚಿ ಬಿದ್ದಿದ್ದಾರೆ. ರೇಖಾ(rekha) ಎಂಬ ಮಹಿಳೆಯೇ ಪತಿಯೊಂದಿಗೆ ಸೇರಿ ಹಲವಾರು ಜನರಿಗೆ ಕೋಟ್ಯಾಂತರ ರೂ. ವಂಚಿಸಿದ್ದಾರೆ. ರೇಖಾಳ ಈ ಕರಾಳ ದಂಧೆ ನಿನ್ನೆ ಮೊನ್ನೆಯಿಂದ ನಡೆದಿಲ್ಲ. 2017ರಿಂದಲೂ ರೇಖಾ ಹಲವರಿಗೆ ಟೋಪಿ ಹಾಕುತ್ತಲೇ ಬಂದಿದ್ದಾಳೆ. ಇಡಿ, ಐಟಿ, ಸಿಐಡಿ ಮಾತ್ರವಲ್ಲ ಜಡ್ಜ್ ಗಳ ಹೆಸರಿನಲ್ಲೂ ಜನರನ್ನು ವಂಚಿಸಿ, ದುಡ್ಡು ಲಪಟಾಯಿಸಿದ್ದಾಳೆ.
ರೇಖಾ, 2017ರಲ್ಲಿ ಮಹಿಳೆಯೊಬ್ಬರಿಗೆ ಬರೋಬ್ಬರಿ 1 ಕೋಟಿ ರೂ. ವಂಚಿಸಿದ್ದಾಳೆ. ಮಹಿಳೆಯೊಬ್ಬರು ಪಾಸ್ ಪೋರ್ಟ್ ವಿಚಾರಕ್ಕೆ ರೇಖಾಳನ್ನು ಭೇಟಿಯಾಗಿದ್ದರು. ಈ ವೇಳೆ ತಾನು ಅಡ್ವೋಕೇಟ್(Advocate) ಇರುವುದಾಗಿ ಹೇಳಿಕೊಂಡು, ನಿಮಗೆ ಮನೆ ಕೊಡಿಸುತ್ತೇನೆಂದು ನಂಬಿಸಿದ್ದಾಳೆ.
ಆನಂತರ ನಿಮ್ಮ ಗಂಡನ ಹೆಸರಿನಲ್ಲಿ ಬ್ಯಾಂಕ್ ಗಳಲ್ಲಿ(bank) ಸಾಲ ಇದೆ. ಬ್ಯಾಂಕ್ ಗಳ ವಿರುದ್ಧವೇ ಕೇಸ್ ಹಾಕುತ್ತೇನೆ. ನಮ್ಮ ಸಂಬಂಧಿ ಒಬ್ಬರು ಜಡ್ಜ್ ಇದ್ದಾರೆ. ಅವರಿಗೆ ಫೀಸ್ ಕೊಟ್ಟರೆ ಅವರು ನಿಮ್ಮಂತೆ ತೀರ್ಪು ನೀಡುತ್ತಾರೆ ಎಂದು ಹೇಳಿ ನಂಬಿಸಿ, 1 ಕೋಟಿ ರೂ. ಪಡೆದು ವಂಚಿಸಿದ್ದಾಳೆ.
ರೇಖಾ ವಂಚಕಿ ಎಂಬುವುದು ಬಯಲಾಗುತ್ತಿದ್ದಂತೆ ಮೋಸಕ್ಕೆ ಹೋದ ಮಹಿಳೆ ಮರಳಿ ಹಣ ಕೇಳಿದ್ದಾರೆ. ಆಗ ರೇಖಾ ಚೆಕ್ ಕೊಟ್ಟಿದ್ದಾಳೆ. ಚೆಕ್ ಗಳು ಬೌನ್ಸ್ ಆದಾಗ ಹಣ(money) ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಳೆ. ಆ ಮಹಿಳೆ 2017ರಲ್ಲೇ ಕೆ.ಆರ್. ಪುರಂ ಠಾಣೆಗೆ ದೂರು ನೀಡಿದ್ದರು.
ಅಲ್ಲದೇ, ಕಾರ್ಲ್ಟನ್ ಟವರ್(Carlton Tower) ಹೆಸರಿನಲ್ಲಿ ಇಜಾಜ್ ಎಂಬುವರಿಗೂ 3.60 ಕೋಟಿ ವಂಚನೆ ಮಾಡಿದ್ದಾಳೆ. ರೇಖಾಳ ಒಂದೊಂದೆ ಮುಖವಾಡ ಬಯಲಿಗೆ ಬರುತ್ತಿದ್ದಂತೆ ಸಿಸಿಬಿ ಕಚೇರಿಗೆ ಬಂದು ರೇಖಾಳ ವಿರುದ್ಧ ಹಲವರು ದೂರು ದಾಖಲಿಸುತ್ತಿದ್ದಾರೆ. ಹೀಗಾಗಿ ಆಕೆಯ ಒಂದೊಂದೇ ಮುಖವಾಡ ಕಳಚಿ ಬೀಳುತ್ತಿವೆ.
ಕೆ.ಆರ್. ಪುರಂನ ನೂತನ್ ಎಂಟರ್ ಪ್ರೈಸಸ್ ಆಕೆಯ ವಂಚನೆಯ ಅಡ್ಡ. ಅಲ್ಲಿ ಕುಳಿತು ಸಾಲ ಕೊಡಿಸುವುದು, ಮನೆ ಕೊಡಿಸುವುದು, ಪಾಸ್ ಪೋರ್ಟ್ ಮಾಡಿಸಿಕೊಡುವ ಕೆಲಸ ಮಾಡುತ್ತಿದ್ದಳು. ಅವಳ ಬಳಿ ಸಹಾಯಕ್ಕೆ ಬಂದವರನ್ನು ವಂಚನೆಯ ಜಾಲಕ್ಕೆ ಬೀಳಿಸಿಕೊಳ್ಳುತ್ತಿದ್ದಳು. ಅವರಿಗೆ ಸುಳ್ಳು ಹೇಳಿ ಕೋಟ್ಯಾಂತರ ರೂ. ವಂಚಿಸುತ್ತಿದ್ದಳು. ಹೆಚ್ಚು ಹಣ ಬರುತ್ತಿದ್ದಂತೆ ಆ ಸಂಸ್ಥೆಯನ್ನು ಕ್ಲೋಸ್ ಮಾಡಿದ್ದಾಳೆ.
ಪೊನ್ನಂಪೇಟೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರೇಖಾಳ ಒಂದೊಂದೇ ಮುಖವಾಡ ಬಯಲಿಗೆ ಬಂದಿದೆ. ಬೆಂಗಳೂರಿನ ಇಬ್ಬರು ಉದ್ಯಮಿಗಳ ಬಳಿ ಹಣ ಪಡೆದು ರೇಖಾ ಸತಾಯಿಸುತ್ತಿದ್ದಳು. 2024ರಲ್ಲಿ ಪೊನ್ನಂಪೇಟೆಯಲ್ಲಿ ರೇಖಾಳ ವಿರುದ್ಧ ವಂಚನೆ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ರೇಖಾ ಅರೆಸ್ಟ್ ಆಗಿದ್ದಳು. ವೃದ್ದರೊಬ್ಬರಿಗೆ ಜಮೀನಿನ ಮೇಲೆ ಸಾಲ ಕೊಡಿಸುತ್ತೇನೆ ಅಂತ 17 ಲಕ್ಷ ರೂ. ವಂಚನೆ ಮಾಡಿ ಅರೆಸ್ಟ್ ಆಗಿದ್ದಳು. ರೇಖಾ ಅರೆಸ್ಟ್ ಆಗಿದ್ದ ಸುದ್ದಿ ತಿಳಿದು ಉದ್ಯಮಿಗಳು ಅಲ್ಲಿಗೆ ತೆರಳಿದ್ದರು. ಆಗಲೇ ಉದ್ಯಮಿಗಳಿಗೆ ರೇಖಾಳ ವಂಚನೆಯ ಜಾಲ ಗೊತ್ತಾಗಿದೆ. ಆನಂತರವೇ ರೇಖಾ ವಿರುದ್ದ ಬೆಂಗಳೂರು ಸಿಸಿಬಿಗೆ ಉದ್ಯಮಿಗಳು ದೂರು ನೀಡಿದ್ದರು.
ಇಡಿ, ಐಟಿ, ಸಿಐಡಿ, ಸಿಸಿಬಿ ಕಚೇರಿ ತೋರಿಸಿ ರೇಖಾ ಯಾಮಾರಿಸಿದ್ದ ಒಂದೊಂದೇ ಪ್ರಕರಣಗಳು ಬಯಲಿಗೆ ಬಂದಿವೆ. ನಕಲಿ ಆಡಿಟರ್ ಸೃಷ್ಟಿಸಿ, ನಕಲಿ ಐಟಿ ದಾಖಲೆ, ಅಕೌಂಟ್ ದಾಖಲೆಗಳ ಸೃಷ್ಟಿಸಿ ವಂಚನೆ ಮಾಡಿದ್ದಾಳೆ. ಹೀಗೆ ಜನರನ್ನು ನಂಬಿಸಲು ಅಕೌಂಟ್ ನಲ್ಲಿ 6 ಕೋಟಿ ಹಣ ಇದೆ ಎಂದು ನಕಲಿ ಫೋಟೋ ತೋರಿಸುತ್ತಿದ್ದಳು. ಬಳಿಕ ಐಟಿಗೆ ಹಣ ಕಟ್ಟಬೇಕೆಂದು ನಕಲಿ ಐಟಿ ದಾಖಲೆ ಸೃಷ್ಟಿಸುತ್ತಿದ್ದಳು. ಜನರನ್ನು ಮತ್ತಷ್ಟು ನಂಬಿಸುವುದಕ್ಕಾಗಿ
ನಕಲಿ ಆಡಿಟರ್ ಸೃಷ್ಟಿ ಮಾಡುತ್ತಿದ್ದಳು.
ಈಗ ಪ್ರಕರಣದಲ್ಲಿ ಬಂಧಿತವಾಗಿರುವ ಚೇತನ್ ನಕಲಿ ಆಡಿಟರ್ ರೀತಿ ಆಕ್ಟ್ ಮಾಡುತ್ತಿದ್ದ. ಆತ ಕುಶಾಲನಗರದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ರೇಖಾಳ ಅಕೌಂಟ್ ನಲ್ಲಿ ಹಣ ಇರುವುದು ನಿಜ. ಹಣ ಐಡಿಗೆ ಕಟ್ಟಬೇಕು ಅಂತ ನಂಬಿಸುತ್ತಿದ್ದ. ಇದಕ್ಕೆಲ್ಲ ಪತಿ ಮಂಜುನಾಥಚಾರಿ ಕೂಡ ಸಾಥ್ ನೀಡುತ್ತಿದ್ದ. ಈತ ಖಾಸಗಿ ಹೌಸಿಂಗ್ ಫೈನಾನ್ಸ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ. ಸದ್ಯ ರೇಖಾಳ ಒಂದೊಂದೇ ಮುಖವಾಡವನ್ನು ಪೊಲೀಸರು ಬಯಲಿಗೆ ತರುತ್ತಿದ್ದಾರೆ.