ಬೆಂಗಳೂರು: ಪ್ರಸಿದ್ಧ ಏರ್ ಶೋಗೆ (Air show)ಕೌಂಟ್ ಡೌನ್ ಆರಂಭವಾಗಿದ್ದು, ಏರ್ ಶೋ ಹೋಗಲು ಬಯಸುವವರಿಗೆ ಬುಕಿಂಗ್ ಆರಂಭವಾಗಿದೆ. ಯಲಹಂಕ ಏರ್ ಪೋರ್ಸ್ ಸ್ಟೇಷನ್ ನಲ್ಲಿ(Yalahanka Air Force Station) ಫೆ. 10 ರಿಂದ ಫೆ 14ರ ವರೆಗೆ ನಡೆಯಲಿರುವ ಏರ್ ಶೋಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಏಷ್ಯಾದ ಅತಿದೊಡ್ಡ ಏರ್ ಶೋ ಕಣ್ತುಂಬಿಕೊಳ್ಳಲು ಇಡೀ ರಾಜ್ಯ ಹಾಗೂ ದೇಶದ ಜನರು ಕಾತುರದಿಂದ ಕಾಯುತ್ತಿದ್ದಾರೆ.
ಈ ಏರ್ ಶೋ ವೀಕ್ಷಿಸಲು ಸಾರ್ವಜನಿಕರಿಗೆ 1 ಸಾವಿರ ಶುಲ್ಕವನ್ನ ನಿಗದಿ ಪಡಿಸಲಾಗಿದ್ದು, ಏರೋ ಇಂಡಿಯಾ ವೆಬ್ ಸೈಟ್ ನಲ್ಲಿ ಬುಕಿಂಗ್ ಆರಂಭವಾಗಿದೆ. ಫೆಬ್ರವರಿ 10 ರಿಂದ ಆರಂಭವಾಗುವ ಏರ್ ಶೋಗೆ ಫೆ. 11 ರಿಂದ ಫೆಬ್ರವರಿ 14ರ ವರೆಗೆ ಸಾರ್ವಜನಿಕರು ನೋಡಲು ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ ಹಾಗೂ ಮಧ್ಯಾಹ್ನದ ಅವಧಿಯಲ್ಲಿ ಪ್ರತಿ ದಿನ ಎರಡು ಬಾರಿ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ.
ವಿದೇಶಿಗರಿಗೆ 50 ಯುಸ್ ಡಾಲಾರ್ ಶುಲ್ಕ ನಿಗದಿಪಡಿಸಲಾಗಿದೆ. ಏರೋ ಇಂಡಿಯಾದಲ್ಲಿ ವಿದೇಶಗಳ 140ಕ್ಕೂ ಅಧಿಕ ವಿದೇಶಿ ರಕ್ಷಣಾ ಉತ್ಪನ್ನಗಳ ಉತ್ಪದಕಾ ಕಂಪನಿಗಳು ಕೂಡ ಈ ಶೋನಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿವೆ.
ಈ ಬಾರಿ ಆತ್ಮನಿರ್ಭರ ಭಾರತ್ ಪರಿಕಲ್ಪನೆಯಡಿ ಭಾರತೀಯ ಯುದ್ದ ವಿಮಾನಗಳು ಹಾಗೂ ಹೆಲಿಕ್ಯಾಪ್ಟರ್ ಗಳ ಪ್ರದರ್ಶನಕ್ಕೆ ಹೆಚ್ಚಿನ ಆಧ್ಯಾತೆ ನೀಡುಲಾಗುತ್ತಿದೆ. ಲಘು ಯುದ್ದ ವಿಮಾನ ತೇಜಸ್,(Tejas) ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ, ಹೆಲಿಕ್ಯಾಪ್ಟರ್ ಗಳ ಮೂಲಕ ಆಕರ್ಷಕ ಪ್ರದರ್ಶನ ನೀಡುವ ಸಾರಂಗ ತಂಡ ಸೇರಿದಂತೆ ಭಾರತದ ಅನೇಕ ವಿಮಾನಗಳು ಮತ್ತು ಹೆಲಿಕ್ಯಾಪ್ಟರ್ ಗಳು ಪ್ರದರ್ಶನ ನೀಡಲಿವೆ.