ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಿದ್ದು, ಕಡಿವಾಣ ಇಲ್ಲದಂತಾಗಿದೆ. ಇದರಿಂದಾಗಿ ಜನರು ಬೆಚ್ಚಿ ಬಿದ್ದಿದ್ದಾರೆ. ಭಯದಲ್ಲೇ ಬದುಕು ಸಾಗಿಸುವಂತಾಗುತ್ತಿದೆ.
ದಿನ ಕೈಯಲ್ಲಿ ಮಾರಾಕಾಸ್ತ್ರ ಹಿಡಿದು ದರೋಡೆ, ಸುಲಿಗೆ ಮಾಡುತ್ತಿದ್ದ ಪುಂಡರು. ಈಗ ಮಾರಕಾಸ್ತ್ರ ಹಿಡಿದು ಬೈಕ್ ಕಳ್ಳತನ ಮಾಡಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯ ಪಕ್ಕದ ರಸ್ತೆಯಲ್ಲಿಯೇ ಮಾರಾಕಾಸ್ತ್ರ ಹಿಡಿದು ಕಳ್ಳತನ ಮಾಡಿದ್ದಾರೆ. ಜ. 25ರಂದು ರಾತ್ರಿ 12 ಗಂಟೆ ಸುಮಾರಿಗೆ ಬೈಕ್ ನಲ್ಲಿ ಬಂದ 3 ಯುವಕರು ಈ ಕೃತ್ಯ ಎಸಗಿದ್ದಾರೆ.
ಕಳ್ಳತನಕ್ಕೆ ಬಂದಿದ್ದ ಯುವಕರು ಮಾರಾಕಾಸ್ತ್ರ ಇಟ್ಟುಕೊಂಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಬ್ಬ ಬೈಕ್ ಲಾಕ್ ಅನ್ ಲಾಕ್ ಮಾಡಿದರೆ, ಮತ್ತೊಬ್ಬ ಕೈಯಲ್ಲಿ ಲಾಂಗ್ ಹಿಡಿದು ಕಾವಲು ಕಾಯುತ್ತಿದ್ದಾನೆ. ಕೈಯಲ್ಲಿ ಲಾಂಗ್ ಹಿಡಿದ ದುಷ್ಕರ್ಮಿಗಳು ರಾಜಾರೋಷವಾಗಿಯೇ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಮನೆಯ ಮಾಲೀಕ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಈಗ ಪೊಲೀಸರು ಪುಂಡರಿಗೆ ಬಲೆ ಬೀಸಿದ್ದಾರೆ.