ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಖ್ಯಾತ ಗಾಯಕಿ ಸಿವಾಶ್ರೀ ಅವರ ಮದುವೆಯು ಫೆಬ್ರವರಿ 16 ರಂದು ನಡೆಯಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ನಿನ್ನೆಯಷ್ಟೇ ತೇಜಸ್ವಿ ಸೂರ್ಯ ಹಾಗೂ ಸಿವಾಶ್ರೀ ಸ್ಕಂದಪ್ರಸಾದ್ ಕಗ್ಗಲಿಪುರ ಬಳಿಯ ಡಾ. ರವಿಶಂಕರ್ ಗುರೂಜೀ ಅವರ ಆರ್ಟ್ ಆಫ್ ಲೀವಿಂಗ್‌ಗೆ ಭೇಟಿ ಕೊಟ್ಟಿದ್ದರು.
ಭೇಟಿ ಸಂದರ್ಭದಲ್ಲಿಯೇ ಮದುವೆಯ ದಿನಾಂಕ ಅಂತಿಮವಾಗಿದ್ದು, ಫೆಬ್ರವರಿ 16 ರಂದು ಇದೇ ಆರ್ಟ್ ಆಪಲ್ ಲೀವಿಂಗ್‌ನಲ್ಲಿ ತೇಜಸ್ವಿ ಸೂರ್ಯ, ಸಿವಾಶ್ರೀ ಸ್ಕಂದಪ್ರಸಾದ್ ಅವರನ್ನು ವರಿಸಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.