ಬೆಂಗಳೂರು: ಸಿಎಂ ಪತ್ನಿ ಮತ್ತು ಭೈರತಿ ಸುರೇಶ್ ಗೆ ಇಡಿ ನೋಟಿಸ್ ನೀಡಿರುವ ವಿಚಾರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಇದೆಲ್ಲ ರಾಜಕೀಯ ಪ್ರೇರಿತ. ನನ್ನ ಕೇಸ್ ನಲ್ಲೂ ಇದೆ ರೀತಿಯಾಗಿದೆ. ಎರಡು ಘಟನೆಗಳು ಒಂದೇ ಸಲ ನಡೆಯಲ್ಲ. ಮುಡಾ ಪ್ರಕರಣದ ವಿಚಾರಣೆ ಈಗಾಗಲೇ ಲೋಕಾಯುಕ್ತದಲ್ಲಿ ನಡೆಯುತ್ತಿದೆ. ಈ ವೇಳೆ ಮತ್ತೊಂದು ಸಂಸ್ಥೆ ತನಿಖೆ ನಡೆಸಲು ಆಗುವುದಿಲ್ಲ. ಹೀಗೆ ತನಿಖೆ ಮಾಡಬಾರದು ಎಂಬುವುದು ಅನೇಕ ಜಡ್ಜ್ ಮೆಂಟ್ ನಲ್ಲಿ ಇದೆ ಎಂದಿದ್ದಾರೆ.
ನನ್ಜ ಕೇಸ್ ನಲ್ಲಿ ಸಿಬಿಐನಲ್ಲಿತ್ತು. ಆಗ ಇಡಿ ಕೂಡ ತನಿಖೆ ಮಾಡಲು ಆರಂಭಿಸಿತು. ಈ ರೀತಿ ಮಾಡಲು ಆಗುವುದಿಲ್ಲ ಎಂದು ಕೆಲವು ಜಡ್ಜ್ ಮೆಂಟ್ ಇದೆ ಎಂದು ಆರೋಪಿಸಿದ್ದಾರೆ.
ಪಕ್ಷದಲ್ಲಿನ ಆಂತರಿಕ ಕಲಹದ ಕುರಿತು ಮಾತನಾಡಿದ ಅವರು, ನಮ್ಮ ಸ್ಟ್ಯಾಂಡ್ ಕ್ಲಿಯರ್ ಇದೆ. ನಮ್ಮ ಸರ್ಕಾರ ಸುಭದ್ರವಾಗಿದೆ. ನಾವೆಲ್ಲ ಸಿಎಂ ಕೆಳಗೆ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.