ಚಿಕ್ಕೋಡಿ: ರಾಜ್ಯ ಬಿಜೆಪಿಯಲ್ಲಿ (BJP)ನ ಆಂತರಿಕ ಸಂಘರ್ಷ ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದೆ. ಹಲವರಂತೂ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದೆ. ವಿಜಯೇಂದ್ರ ಹಾಗೂ ಯತ್ನಾಳ್ ಟೀಂ ಮಧ್ಯೆ ದೊಡ್ಡ ವಿವಾದವೇ ನಡೆಯುತ್ತಿದೆ. ಈಗ ಮಾಜಿ ಸಚಿವ ಬಿ. ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ಮಧ್ಯೆ ಕಾದಾಟ ಶುರುವಾಗಿದೆ. ಇದು ಈಗ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಅಥಣಿಯಲ್ಲಿ ಮಾತನಾಡಿದ ಅವರು, ಬಿಜೆಪಿಯೊಳಗೆ ಶ್ರೀರಾಮುಲು ಅವರದ್ದೊಬ್ಬರದ್ದು ಮಾತ್ರ ಸಮಸ್ಯೆಯಲ್ಲ. ಅನೇಕ ಜನರಿಗೆ ಈ ಸಮಸ್ಯೆ ಇದೆ. ವಿರೋಧ ಪಕ್ಷದಲ್ಲಿ ಭಿನಾಭಿಪ್ರಾಯ ಇರುವುದು ಸತ್ಯ. ಇತ್ತಿಚೆಗೆ ಅದು ಜಾಸ್ತಿ ಆಗಿದೆ. ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಅಲ್ಲ, ಆರು ಬಾಗಿಲು ಆಗಿದೆ ಎಂದು ಲೇವಡಿ ಮಾಡಿದ್ದಾರೆ.
ರೆಡ್ಡಿ ವಿಚಾರದಲ್ಲಿ ರಾಮುಲು ನೊಂದಿದ್ದಾರೆ, ಮನಸ್ಸಿಗೆ ಘಾಸಿ ಆಗಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ತೀರ್ಮಾನ ತೆಗೆದುಕೊಳ್ಳಲಿ. ನಾನು ಅವರನ್ನ ಸಂಪರ್ಕ ಮಾಡಿಲ್ಲಾ ಉಪ ಚುನಾವಣೆಯಲ್ಲಿ ಮಾತ್ರ ಅವರನ್ನು ಭೇಟಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಏನ್ ಆಗುತ್ತೆ ಅಂತ ಕಾದು ನೋಡಬೇಕು ಎಂದದಿದ್ದಾರೆ.
ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಪಕ್ಷಗಳು ಎಂದರೆ ಸಮುದ್ರ ಇದ್ದಂತೆ. ಅಲ್ಲಿ ಯಾರೇ ಬಂದು ಹೋದರೂ ಪಕ್ಷಕ್ಕೆ ಹಾನಿಯಾಗುವುದಿಲ್ಲ. ಯಾರಿಗೆ ಯಾವುದೇ ಹಾನಿ ಅಥವಾ ಲಾಭ ಆಗುವುದಿಲ್ಲ ಎಂದಿದ್ದಾರೆ.