ಬೆಂಗಳೂರು: ಶಸ್ತ್ರ ಚಿಕಿತ್ಸೆಯ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿನ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಗುಣಮುಖರಾಗಿ ಆಸ್ಪತ್ರೆಯಿಂದ ಮರಳಿ ತಾಯ್ನಾಡಿಗೆ ಮರಳಿದ್ದಾರೆ.
ತಾಯ್ನಾಡಿಗೆ ಬಂದ ಶಿವಣ್ಣ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಏರ್ಪೋರ್ಟ್ ಟೋಲ್ ಬಳಿ ಸೇಬಿನ ಹಾರ ಹಾಕಿ ಸ್ವಾಗತ ಮಾಡಲಾಗಿದೆ. ಶಿವರಾಜ್ ಕುಮಾರ್ ನಿವಾಸದ ಬಳಿಯೂ ಹೂಮಳೆಯನ್ನೇ ಅಭಿಮಾನಿಗಳು ಸುರಿಸಿದ್ದಾರೆ.
ಈ ವೇಳೆ ಮಾತನಾಡಿದ ಶಿವಣ್ಣ, ‘ಅಮೆರಿಕಕ್ಕೆ ಹೋಗಬೇಕಾದರೆ ಎಮೋಷನಲ್ ಆಗಿದ್ದೆ, ಭಯವೂ ಇತ್ತು. ಹೋಗುವಾಗ ಭಯವಿತ್ತು, ವಿಮಾನದಲ್ಲಿ ಟ್ರಾವೆಲ್ ಮಾಡುವಾಗಲೂ ಸಹ ನನಗೆ ತುಸು ಅಳುಕು ಇತ್ತು. 6 ಗಂಟೆ ಮನೆಯವರಿಗೂ ಟೆನ್ಶನ್ ಇತ್ತು, ಆದರೆ ಎಲ್ಲವೂ ಯಶಸ್ವಿಯಾಗಿ ಆಯಿತು ಎಂದಿದ್ದಾರೆ.
ಶಸ್ತ್ರ ಚಿಕಿತ್ಸೆಯ ನಂತರ ನಿಧಾನವಾಗಿ ಆರೋಗ್ಯ ಸುಧಾರಿಸುತ್ತಿದೆ. ಒಂದು ತಿಂಗಳು ಪ್ರತಿಯೊಬ್ಬರೂ ನನ್ ಜೊತೆ ಇದ್ದರು. ಎಲ್ಲರೂ ನನ್ನ ಜೊತೆಗೆ ಇದ್ದರು, ನಾನು ಅದೃಷ್ಟವಂತ ಅನಿಸುತ್ತಿದೆ. ಈಗ ತುಂಬಾ ಸ್ಟ್ರಾಂಗ್ ಆಗಿದೀನಿ. ಎಲ್ಲರ ಆಶೀರ್ವಾದ ನನಗೆ ಸಿಕ್ಕಿದೆ. 38 ವರ್ಷಗಳಿಂದಲೂ ನನ್ನನ್ನು ಬೆಳೆಸಿರುವ ಅಭಿಮಾನಿಗಳ ಆಶೀರ್ವಾದದಿಂದ ಮತ್ತೆ ಹುಟ್ಟಿ ಬಂದಿದ್ದೇನೆ. ‘ಕಿಂಗ್ ಈಸ್ ಬ್ಯಾಕ್’ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.