ಬೆಂಗಳೂರು: ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆದು ನಟ ಶಿವಣ್ಣ ಇಂದು ತಾಯ್ನಾಡಿಗೆ ಆಗಮಿಸಿದ್ದಾರೆ.
ಮೂತ್ರಕೋಶದ ಕ್ಯಾನ್ಸರ್ ನಿಂದಾಗಿ ಬಳಲುತ್ತಿದ್ದ ಶಿವರಾಜಕುಮಾರ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆಯ ಹಿನ್ನೆಲೆಯಲ್ಲಿ ಅವರು ಡಿ. 18ರಂದು ಅಮೆರಿಕಕ್ಕೆ ತೆರಳಿದ್ದರು. ಆನಂತರ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾದ ನಂತರ ವಿಡಿಯೋ ಮಾಡಿ ಅಭಿಮಾನಿಗಳ ಹಾರೈಕೆಗೆ ಧನ್ಯವಾದ ಅರ್ಪಿಸಿದ್ದರು. ಕೆಲವು ದಿನ ಅಮೆರಿಕದಲ್ಲೇ ವಿಶ್ರಾಂತಿ ಪಡೆದಿದ್ದರು. ಈಗ ಸಂಪೂರ್ಣ ಗುಣಮುಖರಾಗಿ ತಾಯ್ನಾಡಿಗೆ ಮರಳಿದ್ದಾರೆ.
ಅಮೆರಿಕದಿಂದ ದುಬೈಗೆ ಬಂದು, ಅಲ್ಲಿಂದ ಕನೆಕ್ಟೆಡ್ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅಲ್ಲದೇ, ಶಿವಣ್ಣ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಅಭಿಮಾನಿಗಳು ಸಕಲ ತಯಾರಿಗಳನ್ನು ಹಲವು ದಿನಗಳಿಂದ ಮಾಡಿಕೊಂಡಿದ್ದರು. 500 ಕೆಜಿ ಹೂವಿನ ಹಾರ, ಸೇಬಿನ ಹಾರಗಳನ್ನು ಅಭಿಮಾನಿಗಳು ಪ್ರೀತಿಯಿಂದ ತಯಾರಿಸಿದ್ದಾರೆ. ಹಲವೆಡೆ ಕಟೌಟ್ ಹಾಕಿ ಅಭಿಮಾನಿಗಳು ಸ್ವಾಗತಿಸಿದ್ದಾರೆ.