ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಂಬುಲೆನ್ಸ್ ಗೆ ದಾರಿ ಬಿಡದೆ ಆಟೋ ಚಾಲಕನೊಬ್ಬ ಉದ್ಧಟತನ ಮೆರೆದಿರುವ ಘಟನೆ ನಡೆದಿದೆ.
ನಗರದ ಬೆಳ್ಳಂದೂರಿನ ಹರಳೂರು ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಆಟೋ ಚಾಲಕನೊಬ್ಬ ಆಂಬುಲೆನ್ಸ್ ಗೆ ದಾರಿ ಬಿಟ್ಟಿಲ್ಲ. ದಾರಿ ಬಿಡಿ ಎಂದು ಕೇಳಿಕೊಂಡರೂ ದಾರಿ ಬಿಡದೆ ಆಟೋ ಚಾಲಕ ಪುಂಡಾಟ ಮೆರೆದಿದ್ದಾನೆ. ಈ ಘಟನೆ ಕಳೆದ ಮೂರು ದಿನಗಳ ಹಿಂದೆಯೇ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಬೆಳ್ಳಂದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪುಂಡಾಟ ಮೆರೆದ ಆಟೋ ಚಾಲಕನನ್ನು ಬಂಧಿಸಿದ್ದಾರೆ.