ಬೆಂಗಳೂರು: ನಗರದಲ್ಲಿನ ಪ್ರತಿಷ್ಠಿತ ಕಾಲೇಜಿಗೆ ಬೀಗ ಜಡಿಯಲು ಮುಜರಾಯಿ ಇಲಾಖೆ ಮುಂದಾಗಿದೆ.
ಬಸವನಗುಡಿಯಲ್ಲಿರುವ ಬಿಎಂಎಸ್ ಮಹಿಳಾ ಕಾಲೇಜು ತೆರವಿಗೆ ಮುಜರಾಯಿ ಇಲಾಖೆ ನೋಡಿಸ್ ನೀಡಿತ್ತು. 45 ದಿನದಳೊಗೆ ತೆರವು ಮಾಡುವಂತೆ ನೋಟಿಸ್ ನೀಡಲಾಗಿತ್ತು. ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿರುವ ಬಿಎಂಎಸ್ ಮಹಿಳಾ ಕಾಲೇಜು ಸ್ಥಾಪನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು.
ಸದ್ಯ ತಿಂಗಳಿಗೆ ಒಂದು ಸಾವಿರದಂತೆ ಕಾಲೇಜು ಆಡಳಿತ ಮಂಡಳಿ ಬಾಡಿಗೆ ಪಾವತಿಸುತ್ತಿತ್ತು. ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಕಾಲೇಜು ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಇಲಾಖೆಗೆ ನಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ನೋಟಿಸ್ ನೀಡಿತ್ತು.ಬಿಎಂಎಸ್ ಮಹಿಳಾ ಕಾಲೇಜು ಬೆಂಗಳೂರಿನ ಮೊದಲ ಮಹಿಳಾ ಕಾಲೇಜಾಗಿದೆ.
ಬಿಎಂಎಸ್ ಕಾಲೇಜಿನೊಳಗೆ ಈ ಕುರಿತು ನೋಟಿಸ್ ನ್ನು ಮುಜರಾಯಿ ಇಲಾಖೆಯ ಅಧಿಕಾರಿಗಳು ಅಂಟಿಸಿದ್ದಾರೆ. ನೋಟಿಸ್ ನೀಡಿದ ಐದು ನಿಮಿಷಕ್ಕೆ ಕಾಲೇಜು ಆಡಳಿತ ಮಂಡಳಿ ನೋಟಿಸ್ ಹರಿದು ಹಾಕಿದೆ. ಈಗಾಗಲೇ ಕಾಲೇಜು ಲೀಸ್ ಅವಧಿ ಮುಕ್ತಾಯವಾಗಿದೆ. ಲೀಸ್ ಅವಧಿ ಮುಗಿದಿದ್ದರಿಂದಾಗಿ ಮಾರುಕಟ್ಟೆ ದರಕ್ಕೆ ತಕ್ಕಂತೆ ಬಾಡಿಗೆ ನೀಡಬೇಕೆಂದು ಇಲಾಖೆ ಸೂಚಿಸಿತ್ತು. ಸದ್ಯ ಮಾರುಕಟ್ಟೆಯಲ್ಲಿನ ದರದಂತೆ ಕಾಲೇಜಿಗೆ ತಿಂಗಳಿಗೆ 32 ಲಕ್ಷ ರೂ. ಹಾಗೂ ಬಿಎಂಎಸ್ ಆಸ್ಪತ್ರೆಯಿಂದ 30 ಲಕ್ಷ ರೂ. ಬಾಡಿಗೆ ನೀಡಬೇಕು. ಈ ದರದಲ್ಲಿ ಬಾಡಿಗೆ ನೀಡುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.