ಬೆಂಗಳೂರು: ಆಟೋ ಟಚ್ ಆಗಿದ್ದಕ್ಕೆ ಚಾಲಕನ ಹತ್ಯೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರ್ ಟಿ ನಗರದ ರೆಹ್ಮತ್ ನಗರದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಆಟೋ ಚಾಲಕ ಸಲ್ಮಾನ್ (28) ಸಾವನ್ನಪ್ಪಿರುವ ಚಾಲಕ. ಸೈಯದ್ ತಬ್ರೇಜ್, ಸೈಯದ್ ಫರ್ವೇಜ್ , ಸಾಧಿಕ್ , ತೌಸೀಫ್ ಬಂಧಿತ ಆರೋಪಿಗ.ಳು
ಆರೋಪಿ ಪರ್ವೇಜ್ ತಂದೆಗೆ ಸಲ್ಮಾನ್ ಆಟೋ ಟಚ್ ಆಗಿದೆ.
ಆಗ ಸಲ್ಮಾನ್ ಹಾಗೂ ಆರೋಪಿ ತಂದೆ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಸಂಜೆ ಪರ್ವೇಜ್ ಅಂಡ್ ಟೀಂ ಸಲ್ಮಾನ್ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಗಲಾಟೆಯಲ್ಲಿ ನಾಲ್ವರು ಸಲ್ಮಾನ್ ಮೇಲೆ ಹಲ್ಲೆ ಮಾಡಿದದಾರೆ. ಹೀಗಾಗಿ ಸಲ್ಮಾನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.