ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಜನಾರ್ದನ ರೆಡ್ಡಿ, ರಾಮುಲು ನಡುವೆ ಫೈಟ್ ವಿಚಾರದ ನಡುವೆಯೇ, ಇಂದು ಬೆಂಗಳೂರಿಗೆ ಬಿ.ಶ್ರೀರಾಮುಲು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಇನ್ನು ಬಿ.ಶ್ರೀರಾಮುಲು. ಮಾಜಿ ಸಚಿವ ಹಾಗೂ ಬಿಜೆಪಿಯ ಕೋರ್ ಕಮಿಟಿ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕಳೆದೆರಡು ದಿನಗಳ ಹಿಂದೆ ರಾಜ್ಯದಲ್ಲಿ ನಡೆದ ಕೋರ್ ಕಮಿಟಿ ಸಭೆ ಅವರಿಗೆ ಬೇಸರವಾಗಿದೆ. ಅಷ್ಟಕ್ಕೂ ಆ ಬೇಸರ ಏಕೆ? ಎಂಬ ಪ್ರಶ್ನೆ ಎದ್ದಿದೆ.
ಸಭೆಯಲ್ಲಿ ರಾಮುಲುಗೆ ರಾಧಾಮೋಹನ್ ದಾಸ್ ಅಗರ್‌ವಾಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ. ಸಂಡೂರು ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯ ಸೋಲಿನ ವಿಚಾರ ಪ್ರಸ್ತಾಪಿಸಿ, ರಾಮುಲುಗೆ ರಾಧಾಮೋಹನ್ ದಾಸ್ ಅಗರ್‌ವಾಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇತ್ತ ರಾಧಾಮೋಹನ್ ದಾಸ್ ಅಗರ್‌ವಾಲ್ ಸಭೆ ಮುಗಿಸಿ ಹೊರಟರೇ, ಬಳ್ಳಾರಿಗೆ ಬಿ. ಶ್ರೀರಾಮುಲು ಹೋಗಿದ್ದರು.
ನಿನ್ನೆ ಏಕಾಏಕಿ ಮಾಧ್ಯಮಗಳಿಗೆ ಕೋರ್ ಕಮಿಟಿಯಲ್ಲಿ ಆದ ಘಟನಾವಳಿಗಳ ಬಗ್ಗೆ ಮಾಹಿತಿ ತಿಳಿಸಿದ ಬಿ.ಶ್ರೀರಾಮುಲು ಅಂಡ್ ಟೀಂ. ತಮ್ಮ ಒಂದು ಕಾಲದ ಆಪ್ತಮಿತ್ರ, ಕುಚುಕು ಗಾಲಿ ಜನಾರ್ದನ ರೆಡ್ಡಿ ನಡೆಯ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ರಾಮುಲು, ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಹೇಳಿಕೆ ಕೊಟ್ಟ ಕೂಡಲೇ ಬೆಂಗಳೂರಿನಲ್ಲಿ ರೆಡ್ಡಿ ಸುದ್ದಿಗೋಷ್ಟಿ ನಡೆಸಿ, ವಾಗ್ದಾಳಿ ನಡೆಸಿದ್ದಾರೆ. ಗಾಲಿ ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ ನಡೆಸುತ್ತಿದ್ದಂತೆ, ಪ್ರತಿಯಾಗಿ ಬಳ್ಳಾರಿಯಲ್ಲಿ ರಾಮುಲು ಸುದ್ದಿಗೋಷ್ಠಿ ನಡೆಸಿದರು. ಮುಂದಿನ ವಾರ ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚಿಸಿರುವ ಬೆನ್ನಲ್ಲೇ ಬಿ. ಶ್ರೀರಾಮುಲು ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.