ಹಾವೇರಿ: ಮೈಕ್ರೋ ಫೈನಾನ್ಸ್ (Micro-Finance) ಸಿಬ್ಬಂದಿ ಕಿರುಕುಳಕ್ಕೆ ನಲುಗುತ್ತಿರುವ ಮಹಿಳೆಯರು ಮಾಂಗಲ್ಯ ಸರ ಕಳುಹಿಸುವ ಅಭಿಯಾನ (Save Mangalya Chain Campaign) ಮುಂದುವರೆಸಿದ್ದಾರೆ. ಈಗಾಗಲೇ ರಾಯಚೂರು ಜಿಲ್ಲೆಯ ಮಹಿಳೆಯೊಬ್ಬರು ಗೃಹ ಸಚಿವರಿಗೆ ಮಾಂಗಲ್ಯ ಸರ ಕಳುಹಿಸಿದರೆ, ಹಾವೇರಿ ಜಿಲ್ಲೆಯ ಮಹಿಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಮಾಂಗಲ್ಯ ಸರ ಕಳುಹಿಸಿದ್ದಾರೆ. ಈ ಮೂಲಕ ಫೈನಾನ್ಸ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಮೈಕ್ರೋಫೈನಾನ್ಸ್ ಗಳ ಹಾವಳಿ ಹೆಚ್ಚಾಗುತ್ತಿರುವುದರಿಂದಾಗಿ ಜನರು ಆತ್ಮಹತ್ಯೆ ಹಾದಿ ಹಿಡಿದಿದ್ದರು. ಹಲವರು ಊರು ತೊರೆದಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮೈಕ್ರೋಫೈನಾನ್ಸ್‌ಗಳ ಕಿರುಕುಳಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಕಠಿಣ ಕ್ರಮದ ಭರವಸೆ ನೀಡಿದ್ದರು. ಅಲ್ಲದೇ, ಸಿಎಂ ಈ ವಾರದಲ್ಲಿ ಫೈನಾನ್ಸ್ ಗಳ ದಬ್ಬಾಳಿಕೆಗೆ ಕಡಿವಾಣ ಹಾಕುವುದಕ್ಕಾಗಿ ಚರ್ಚಿಸಲು ಸಭೆ ಕೂಡ ಕರೆದಿದ್ದಾರೆ.
ಹಾವೇರಿಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಪತಿ ಬಲಿಯಾಗಿದ್ದು, ಮಹಿಳೆ ಮಾಂಗಲ್ಯ ಸರ ಕಳುಹಿಸಿದ್ದಾರೆ.